ಉಚ್ಚಿಲ ದಸರಾ 2024: ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವ ಸಾಂಸ್ಕೃತಿಕ ವೈವಿಧ್ಯ , ಮನರಂಜಿಸಿದ ಹೆಣ್ಣುಮಕ್ಕಳ ಹುಲಿ ಕುಣಿತ ಮತ್ತು ಕುಸ್ತಿ ಸ್ಪರ್ಧೆ – vishwanews24

Featured, ದಕ್ಷಿಣ ಕನ್ನಡ

ಉಚ್ಚಿಲ ದಸರಾ 2024: ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವ ಸಾಂಸ್ಕೃತಿಕ ವೈವಿಧ್ಯ ,  ಮನರಂಜಿಸಿದ ಹೆಣ್ಮಕ್ಕಳ ಹುಲಿ ಕುಣಿತ ಮತ್ತು ಕುಸ್ತಿ ಸ್ಪರ್ಧೆ

ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ 2024ರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತಿವೆ.

ಸ್ಥಳೀಯರಿಂದ ಹಿಡಿದು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಪ್ರಸಿದ್ಧ ಕಲಾವಿದರ ಯಕ್ಷಗಾನ, ನೃತ್ಯ ರೂಪಕ, ನೃತ್ಯ ವೈವಿಧ್ಯ, ಹರಿಕಥೆ ಸಹಿತ ಕಲೆ ಮತ್ತು ಸಂಸ್ಕೃತಿಯ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆತಿದೆ.

ಮುಳೂರು : ರಸ್ತೆ ದಾಟುತ್ತಿದ್ದಾಗ  ಖಾಸಗಿ ಬಸ್ ಡಿಕ್ಕಿ ; ಪತಿ ಸ್ಥಳದಲ್ಲೇ ಮೃತ್ಯು,  ಪತ್ನಿಗೆ ಗಂಭೀರ ಗಾಯ – vishwanews24

ತುಳುನಾಡಿನ ಧಾರ್ಮಿಕ ಸಂಸ್ಕೃತಿಯನ್ನು ಉಳಿಸುವಲ್ಲಿ ನಡೆಸಿ ರುವ ಸಾಮೂಹಿಕ ಕುಣಿತ ಭಜನೆ, ನಿತ್ಯ ಭಜನಾ ಕಾರ್ಯಕ್ರಮ, ಶರನ್ನ ವರಾತ್ರಿಯ ಪರಂಪರೆಯನ್ನು ಮೆರೆ ಯುವ ದಾಂಡಿಯಾ ಮತ್ತು ಗರ್ಬಾ ನೃತ್ಯಗಳಲ್ಲೂ ಜನರು ಪಾಲ್ಗೊಂಡಿದ್ದಾರೆ.

ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಸಮಾಜದ ವಿವಿಧ ಸಂಘ-ಸಂಸ್ಥೆಗಳು, ಯುವ ಸಂಘಟನೆ, ಮಹಾಸಭಾ ಮತ್ತು ಮಹಿಳಾ ಸಭಾದ ಸದಸ್ಯರೂ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿರುವುದು ವಿಶೇಷ.

ಅಜಯ್‌ ವಾರಿಯರ್‌ ಸಂಗೀತ
ಅ. 11ರಂದು ಮಹಾನವಮಿಯಂದು ಸಂಜೆ 6.30ಕ್ಕೆ ಕಲಾಮೃತ ಮಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ಕ್ಕೆ ಹಿನ್ನೆಲೆ ಗಾಯಕ ಅಜಯ್‌ ವಾರಿಯರ್‌ ಬೆಂಗಳೂರು ಮತ್ತು ತಂಡದಿಂದ ಸಂಗೀತ ರಸ ಸಂಜೆ ಇರಲಿದೆ.

ಮನರಂಜಿಸಿದ ಹೆಣ್ಮಕ್ಕಳ ಹುಲಿ ಕುಣಿತ ಮತ್ತು ಕುಸ್ತಿ ಸ್ಪರ್ಧೆ
ಪ್ರಥಮ ಬಾರಿಗೆ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯು ಕರಾವಳಿಯ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ, ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸಾಮೂಹಿಕ ದಾಂಡಿಯಾ ನೃತ್ಯ, ವಿಸ್ಮಯ ಜಾದೂ, ಶತವೀಣಾವಲ್ಲರಿ ಹೆಚ್ಚಿನ ಜನಾಕರ್ಷಣೆಗೆ ಕಾರಣವಾಗಿದೆ.

ಮುಳೂರು : ರಸ್ತೆ ದಾಟುತ್ತಿದ್ದಾಗ  ಖಾಸಗಿ ಬಸ್ ಡಿಕ್ಕಿ ; ಪತಿ ಸ್ಥಳದಲ್ಲೇ ಮೃತ್ಯು,  ಪತ್ನಿಗೆ ಗಂಭೀರ ಗಾಯ – vishwanews24

Leave a Reply