ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಂಕಿ ಅವಘಡ : 13 ಮಂದಿಗೆ ಗಾಯ – Vishwanews24
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಂಕಿ ಅವಘಡ ; 13 ಮಂದಿಗೆ ಗಾಯ
ಮಧ್ಯಪ್ರದೇಶ : ಭಸ್ಮ ಆರತಿ ವೇಳೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 13 ಪುರೋಹಿತರಿಗೆ ಸುಟ್ಟ ಗಾಯಗಳಾಗಿವೆ. ಹೋಳಿ ಆರತಿ ವೇಳೆ ಗುಲಾಲ್ ಊದಿದಾಗ ಬೆಂಕಿ ವ್ಯಾಪಿಸಿ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಹಲವಾರು ಅರ್ಚಕರು ಮತ್ತು ಭಕ್ತರಿಗೆ ಸುಟ್ಟ ಗಾಯಗಳಾಗಿದ್ದು, ಉಜ್ಜಯಿನಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಮುಖ್ಯ ಅರ್ಚಕ ಸಂಜಯ್ ಗುರು, ವಿಕಾಸ್ ಪೂಜಾರಿ, ಮನೋಜ್ ಪೂಜಾರಿ, ಅಂಶ್ ಪುರೋಹಿತ್, ಸೇವಕ ಮಹೇಶ್ ಶರ್ಮಾ, ಚಿಂತಾಮನ್ ಗೆಹ್ಲೋಟ್ ಮತ್ತಿತರರು ಗಾಯಗೊಂಡಿದ್ದಾರೆ. ಒಂಬತ್ತು ಜನರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅವರನ್ನು ಇಂದೋರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಣಿಪಾಲ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ – ಪ್ರಕರಣ ದಾಖಲು – Vishwanews24
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೋಳಿ ಆಚರಣೆಯ ಅಂಗವಾಗಿ ಗರ್ಭಗುಡಿಯೊಳಗೆ ‘ಗುಲಾಲ್’ (ಆಚರಣೆಗಳು ಮತ್ತು ಹೋಳಿ ಸಮಯದಲ್ಲಿ ಬಳಸುವ ಬಣ್ಣದ ಪುಡಿ)ಎಸೆಯಲಾಗುತ್ತಿತ್ತು. ಯಾರೋ ಬಣ್ಣದ ಗುಲಾಲನ್ನು ಮಣ್ಣಿನ ದೀಪದ ಮೇಲೆ ಎಸೆದರು. ಈ ವೇಳೆ ಗುಲಾಲ್ನೊಳಗಿನ ರಾಸಾಯನಿಕಗಳು ಬೆಂಕಿಗೆ ತಗುಲಿ ಒಮ್ಮಿಂದೊಮ್ಮೆಲೆ ಬೆಂಕಿ ಹೆಚ್ಚಾಗಿ ಈ ಘಟನೆ ನಡೆದಿರಬಹುದು ಎಂದು ಊಹಿಸಿದ್ದಾರೆ.
