ಉಡುಪಿ : ನಗರವನ್ನು ಅಭಿವೃದ್ಧಿ ಮಾಡುವುದು ದೊಡ್ಡ ಸಂಗತಿಯೇ ಅಲ್ಲ, ಅಧಿಕಾರಿಗಳು ಒತ್ತಡ ನಿಭಾಯಿಸಿಕೊಂಡು ಕೆಲಸ ನಿರ್ವಹಿಸಿದರೆ ಎಲ್ಲವೂ ಸಾಧ್ಯ: ನೂತನ ಜಿಲ್ಲಾಧಿಕಾರಿ -Vishwanews24
ಉಡುಪಿ: ನಗರಸಭೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಮಾಡುವ ಮನಸ್ಥಿತಿಯಲ್ಲಿ ಇರಬೇಕು. 10 ಗಂಟೆಗೆ ಕೆಲಸಕ್ಕೆ ಬರುವ ಅಧಿಕಾರಿಗಳು ಬೇಕಿಲ್ಲ. ಮೈಸೂರು ಜಿಲ್ಲೆಯನ್ನು ನಂಬರ್ ವನ್ ಮಾಡಿದಂತೆ ಉಡುಪಿಯನ್ನೂ ಮಾಡಲು ಸಾಧ್ಯವಿದೆ. ಇದಕ್ಕಾಗಿ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ನೂತನ ಜಿಲ್ಲಾಧಿಕಾರಿ, ನಗರಸಭೆಯ ಆಡಳಿತಾಧಿಕಾರಿ ಜಿ.ಜಗದೀಶ್ ಅಧಿಕಾರಿ ಗಳಿಗೆ ಖಡಕ್ ಸೂಚನೆ ನೀಡಿದರು.
ಗುರುವಾರ ಶಾಸಕ ರಘುಪತಿ ಕೆ.ಭಟ್ ನೇತೃತ್ವದಲ್ಲಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭಾ ಚುನಾ ಯಿತ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಎಚ್ಚರಿಕೆ ನೀಡಿದರು.
ವಿವಿಧೆಡೆ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವವಿದೆ. ಉಡುಪಿ ಜಿಲ್ಲೆಯಲ್ಲಿಯೂ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದೇನೆ. ನಗರಾಭಿವೃದ್ಧಿ ಬಗ್ಗೆ ಹಲವು ಅನುಭವಗಳಿವೆ. ಈ ನಗರವನ್ನು ಅಭಿವೃದ್ಧಿ ಮಾಡುವುದು ದೊಡ್ಡ ಸಂಗತಿಯೇ ಅಲ್ಲ. ಅಧಿಕಾರಿಗಳು ಒತ್ತಡ ನಿಭಾಯಿಸಿಕೊಂಡು ಕೆಲಸ ನಿರ್ವಹಿಸಿದರೆ ಎಲ್ಲವೂ ಸಾಧ್ಯ ಎಂದರು.
ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಾಮಾನ್ಯ ಕೆಲಸಕಾರ್ಯ ಗಳಿಗೆ ಜನರಿಗಿಂತಲೂ ಯಂತ್ರೋಪಕರಣಗಳನ್ನು ಬಳಸಿಕೊಳ್ಳಬೇಕು. ನಗರ
ಸಭೆಯ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಸಹಿತ ಸಾರ್ವಜನಿಕ ರೊಂದಿಗೆ ಔಚಿತ್ಯದಿಂದ ವರ್ತಿಸಬೇಕು. ಇದಕ್ಕೆ ಆಯುಕ್ತರು ವ್ಯವಸ್ಥೆ ಕಲ್ಪಿಸಬೇಕು. ನಗರವನ್ನು ಅಭಿವೃದ್ಧಿಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗುವುದು. ಮರಳು ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುವುದು ಎಂದರು.
