ಉಡುಪಿ: PFI ಸಂಘಟನೆಗೆ ಸೇರಿದ ಕಚೇರಿಗಳಿಗೆ ಬೀಗ ಜಡಿದ ಪೊಲೀಸರು – Vishwanews24

Featured, ಉಡುಪಿ

ಉಡುಪಿ: ಪಿಎಫ್‌ಐ ಸಂಘಟನೆಗೆ ಸೇರಿದ ಕಚೇರಿಗಳಿಗೆ ಬೀಗ ಜಡಿದ ಪೊಲೀಸರು

ಉಡುಪಿ: ಕೇಂದ್ರ ಸರಕಾರವು ಪಿಎಫ್‌ಐ ಮತ್ತಿತರ 8 ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲೆಯ ವಿವಿಧೆಡೆ ಪಿ ಎಫ್ ಐ ಸಂಘಟನೆಗೆ ಸೇರಿದ ಹಲವು ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ‌.

ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪಿ ಎಫ್ ಐ ಸಂಘಟನೆಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪಿ ಎಫ್ ಐ ಗೆ ಯಾವುದೇ ಅಧಿಕೃತ ಕಚೇರಿಗಳಿಲ್ಲದಿದ್ದು, ಎಸ್ ಡಿ ಪಿ ಐ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಹಿನ್ನಲೆಯಲ್ಲಿ ಅವುಗಳಿಗೆ ಸಹ ಬೀಗ ಜಡಿದಿದ್ದಾರೆ. ಇದನ್ನೂ ಓದಿ: ಮಂಗಳ ಕಾರ್ಯಗಳಿಂದ ಶುಭ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಉಡುಪಿಯ ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡದಲ್ಲಿದ್ದ ಕಚೇರಿ, ಹೂಡೆ, ಗಂಗೊಳ್ಳಿಯ ಎಸ್ ಡಿ ಪಿ ಐ ಕಚೇರಿ ಸೀಜ್ ಮಾಡಿದ್ದು ಎಸ್ ಡಿ ಪಿ ಐ ನಾಯಕರಾದ ಬಶೀರ್ ಮತ್ತು ನಜೀರ್ ಮನೆಗೂ ದಾಳಿ ನಡೆಸಿದ್ದು ಈ ವೇಳೆ ಅವರ ಮನೆಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಾಪಾಸಾಗಿದ್ದಾರೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆಯ ಸೆಲ್ಫಿಗೆ ಬೆಲೆ ಕಟ್ಟುವ ಮುನ್ನಾ ಮಿಥುನ್ ರೈ ತನ್ನ ಯೋಗ್ಯತೆ ಅರಿತುಕೊಳ್ಳಲಿ: ವೀಣಾ ಶೆಟ್ಟಿಯಿಂದ ಶೋಭಾ ಪರ ಬ್ಯಾಟಿಂಗ್ -vishwanews24

Leave a Reply