ಉಡುಪಿ: ಅ 6. ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅ. 6ರಂದು ‘ಭಾರತಕ್ಕಾಗಿ ನಡಿಗೆ’ ಜಾಥಾ – Vishwanews24
ಉಡುಪಿ: ಅ 6. ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅ. 6ರಂದು ‘ಭಾರತಕ್ಕಾಗಿ ನಡಿಗೆ’ ಜಾಥಾ
ಉಡುಪಿ: ಸ್ವಾತಂತ್ರ್ಯ 75ನೇ ವರ್ಷದ “ಅಮೃತ ಮಹೋತ್ಸವ” ಸಂಭ್ರಮಾಚಾರಣೆನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೀರ-ಯೋಧರ ತ್ಯಾಗ, ಬಲಿದಾನ ಮತ್ತು ಶಾಂತಿ, ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶವನ್ನು ಸಾರುವ ಸಲುವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾವು, ಅಗಸ್ಟ್ 6ರಂದು ಶನಿವಾರ ಬೆಳಿಗ್ಗೆ 9.00 ಘಂಟೆಗೆ ಕಾಲ್ನಡಿಗಯು ಕನ್ನಾರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಿಂದ ಪ್ರಾರಂಭವಾಗಿ ಕಿನಿಮುಲ್ಕಿ ಮುಖ್ಯದ್ವಾರದ ಮೂಲಕ ಸಾಗಿ ಉಡುಪಿ ಜೋಡುರಸ್ತೆಯ ಮುಖಾಂತರ ಕೋರ್ಟ್ ರೋಡ್ ಮೂಲಕ ಸರ್ವಿಸ್ ಬಸ್ ನಿಲ್ದಾಣದ ಮೂಲಕ ಸಾಗಿ ಕಿದಿಯೂರು ಹೋಟೆಲ್ನ ಮೂಲಕ ಸಾಗಿ ಸಿಟಿ ಬಸ್ಸು ನಿಲ್ದಾಣದಿಂದ ಕಲ್ಸಂಕದ ಮೂಲಕ ಕಡಿಯಾಳಿಯಾಗಿ ಎಂ ಜಿ ಎಂ ಕಾಲೇಜಿನ ಮುಂಭಾಗದಿಂದ ಸಾಗಿ ಕೊನೆಗೆ ಇಂದ್ರಾಳಿ ಬಸ್ಸು ನಿಲ್ದಾಣ ಬಳಿ ಸಮಾರೋಪ ಸಭೆಯು ನಡೆಯಲಿದೆ.
ಸುಬ್ರಮಣ್ಯ ಧಾರಾಕಾರ ಮಳೆ: ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಜಲಾವೃತ – Vishwanews24
ದೇಶಪ್ರೇಮ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಈ ಒಂದು ಐತಿಹಾಸಿಕ ಕಾಲ್ನಡಿಗೆ ಜಾಥಾದಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುವುದರೊಂದಿಗೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಹಿರಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದು ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ ಮುಖಂಡರು, ಪಕ್ಷದ ವಿವಿಧ ಘಟಕ, ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಸದಸ್ಯರು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕ ಬಂಧು ಮಿತ್ರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮನವಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಯುವ ಮೋರ್ಛಾ ವಿಶೇಷ ಸಭೆಯಲ್ಲಿ ಪ್ರವೀಣ್ ನೆಟ್ಟಾರು ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ – Vishwanews24
