ಉಡುಪಿ : ಅಂಗಡಿಗಳಲ್ಲಿ ಪ್ರಾಣಿ ವಧೆ ಮಾಡಿ ನೇತು ಹಾಕುವುದರಿಂದ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವನೆ ಬೆಳೆಯಲು ಕಾರಣವಾಗುತ್ತದೆ : ಪೇಜಾವರ ಶ್ರೀ – Vishwanews24

Featured, ಉಡುಪಿ

ಉಡುಪಿ : ಅಂಗಡಿಗಳಲ್ಲಿ ಪ್ರಾಣಿ ವಧೆ ಮಾಡಿ ನೇತು ಹಾಕುವುದರಿಂದ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವನೆ ಬೆಳೆಯಲು ಕಾರಣವಾಗುತ್ತದೆ : ಪೇಜಾವರ ಶ್ರೀ

ಉಡುಪಿ : ಅಂಗಡಿಗಳಲ್ಲಿ ಪ್ರಾಣಿಗಳನ್ನು ವಧೆ ಮಾಡಿ ನೇತು ಹಾಕುವುದರಿಂದ ಅದನ್ನು ನೋಡುವ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವನೆಗಳು ಬೆಳೆಯಲು ಕಾರಣವಾಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಈ ವಿಚಾರವಾಗಿ ಉಡುಪಿಯ ಪೇಜಾವರ ಮಠದಲ್ಲಿ ಮಾತನಾಡಿದ ಅವರು, ಮಕ್ಕಳು ಭಾವೀ ಪ್ರಜೆಗಳು. ಮಕ್ಕಳು ಇದನ್ನು ನೋಡಿದಾಗ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅವರ ಮನಸ್ಸನ್ನು ಬಾಲ್ಯದಲ್ಲೇ ಹಿಂಸೆಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಇದಲ್ಲದೇ ಟಿವಿ ಮತ್ತಿತರ ಮಾಧ್ಯಮಗಳಲ್ಲಿ ಬರುವ ಹಿಂಸೆಯಿಂದಲೂ ಅವರನ್ನು ದೂರ ಇರುವಂತೆ ಪೋಷಕರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಕಳ :  ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ತಾಯಿ ಹಾಗೂ ಐದು ಜನ ಮಕ್ಕಳಿಗೆ ಆಶ್ರಯ ಒದಗಿಸಿದ ಹೊಸ ಬೆಳಕು ಆಶ್ರಮ – Vishwanews24

Leave a Reply