ಉಡುಪಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ: ಅರ್ಜಿ ಆಹ್ವಾನ – Vishwanews24
ಉಡುಪಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ: ಅರ್ಜಿ ಆಹ್ವಾನ
ಉಡುಪಿ : ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ಗ್ರಾಮ ಪಂಚಾಯತ್, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ ಶಿವಾನಂದನಗರ (ಸಾಮಾನ್ಯ), ಹೆಜಮಾಡಿ ಬೋರುಗುಡ್ಡೆ (ಸಾಮಾನ್ಯ), ಕಾಜರಗುತ್ತು (ಸಾಮಾನ್ಯ), ಧರ್ಮೆಟ್ಟು (ಸಾಮಾನ್ಯ) ಮತ್ತು ಮಣಿಪುರ ವಿ.ಪಿ (ಸಾಮಾನ್ಯ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿ.ಯು.ಸಿ ತೇರ್ಗಡೆ ಹೊಂದಿರುವ, ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಹಾಗೂ ಅದಮಾರು (ಸಾಮಾನ್ಯ), ಶಿವಾನಂದನಗರ (ಸಾಮಾನ್ಯ), ಬೊಳ್ಜೆ (ಸಾಮಾನ್ಯ), ಪಿತ್ರೋಡಿ (ಸಾಮಾನ್ಯ), ಬಬ್ಬರ್ಯಗುಡ್ಡೆ (ಸಾಮಾನ್ಯ), ಬೊಟ್ಟಲ (ಸಾಮಾನ್ಯ), ಎರ್ಮಾಳು ಬಡಾ (ಸಾಮಾನ್ಯ), ನವಶಕ್ತಿ (ಸಾಮಾನ್ಯ), ಮಹಾತ್ಮಾಗಾಂಧಿ ಶಾಲೆ (ಸಾಮಾನ್ಯ), ಎಲ್.ವಿ.ಪಿ-2 (ಸಾಮಾನ್ಯ), ಪೊಲಿಪು ಗರಡಿ (ಸಾಮಾನ್ಯ), ಕಡೆಕಾರು ಪಡುಕೆರೆ (ಸಾಮಾನ್ಯ) ಮತ್ತು ಮಣಿಪುರ ವಿ.ಪಿ (ಸಾಮಾನ್ಯ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗೆ 19 ರಿಂದ 35 ವರ್ಷದೊಳಗಿನ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ/ಮುಕ್ತ ವಿದ್ಯಾಲಯಗಳಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರುವ, ಪ್ರಥಮ/ದ್ವಿತೀಯ ಭಾಷೆಯಾಗಿ ಕನ್ನಡ, ಸಾಮಾನ್ಯ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಉಡುಪಿ ದೂರವಾಣಿ ಸಂಖ್ಯೆ : 0820-2524055 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾಧ್ಯಂತ ನಾಳೆಯಿಂದ ‘ಸರ್ಕಾರಿ ನೌಕರ’ರ ಮುಷ್ಕರ: ‘ಸರ್ಕಾರಿ ಸೇವೆ’ಯಲ್ಲಿ ಭಾರೀ ವ್ಯತ್ಯಯ – Vishwanews24
