ಉಡುಪಿ: ಅಜ್ಜರಕಾಡಿನಲ್ಲಿ 10 ದಿನಗಳ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ -Vishwanews24

Featured, ಉಡುಪಿ

ಉಡುಪಿ: ಅಜ್ಜರಕಾಡಿನಲ್ಲಿ 10 ದಿನಗಳ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ -Vishwanews24

ಉಡುಪಿ: ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ರದ್ದಾಗಿದ್ದ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ ಉಡುಪಿಯ ಅಜ್ಜರಕಾಡಿನಲ್ಲಿ ಆರಂಭವಾಗಿದ್ದು, ಸಾವಿರಾರು ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಉಡುಪಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸೇನೆಗೆ ಸೇರಲು ತವಕಿಸುವ ಅಭ್ಯರ್ಥಿಗಳ ದಂಡೇ ನೆರೆದಿದೆ. ಭೂ ಸೇನೆ ಅಧಿಕಾರಿಗಳು ಅಜ್ಜರಕಾಡಿನಲ್ಲಿ ಬೀಡು ಬಿಟ್ಟಿದ್ದು, ಸೇನಾ ರ್ಯಾಲಿಯನ್ನು ನಡೆಸುತ್ತಿದ್ದಾರೆ. ಮೊದಲ ದಿನ ಉಡುಪಿ, ದ.ಕ., ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಪಾಲ್ಗೊಂಡರು.

ಸೇನಾಧಿಕಾರಿಗಳು ಅಭ್ಯರ್ಥಿಗಳನ್ನು ದೈಹಿಕ ಕ್ಷಮತೆ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಓಟ, ಉದ್ದ ಜಿಗಿತ ಸೇರಿದಂತೆ ಕಠಿನ ಟಾಸ್ಕ್ ಗಳನ್ನು ಪಾಸ್ ಮಾಡಬೇಕಾಗಿದ್ದು, ಜೊತೆಗೆ ಎತ್ತರ, ಎದೆ ಸುತ್ತಳತೆಯ ಪರೀಕ್ಷೆಯೂ ನಡೆಯುತ್ತಿದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಮೂಲಕ ಸೇನೆಗೆ ನೇಮಕವಾಗಲಿದ್ದಾರೆ.

ಇದನ್ನೂ ಓದಿ : ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪತನ : ಓರ್ವ ಪೈಲಟ್ ಸಾವು -Vishwanews24