ಉಡುಪಿ : ಆಗುಂಬೆ ಘಾಟಿ ಕಾಮಗಾರಿ ವಾಹನ ಸಂಚಾರ ನಿರ್ಬಂಧ ; ಬದಲಿ ಮಾರ್ಗದ ವಿವರ -Vishwanews24
ಉಡುಪಿ : ಆಗುಂಬೆ ಘಾಟಿ ಕಾಮಗಾರಿ ವಾಹನ ಸಂಚಾರ ನಿರ್ಬಂಧ ; ಬದಲಿ ಮಾರ್ಗದ ವಿವರ -Vishwanews24
ಉಡುಪಿ : ರಾಷ್ಟ್ರೀಯ ಹೆದ್ದಾರಿ 169 ಎ ರ ಕಿ. ಮೀ. 33.00 ರಿಂದ 51.60 ವರೆಗೆ ನಿಯತಕಾಲಿಕ ದುರಸ್ಥಿ ಹಿನ್ನಲೆಯಲ್ಲಿ ರಸ್ತೆ ದುರಸ್ಥಿ ಕಾಮಗಾರಿಯನ್ನು ಆಗುಂಬೆ ಘಾಟಿಯಲ್ಲಿ ನಿರ್ವಹಿಸಬೇಕಾಗಿರುವುದರಿಂದ ಕಿರಿದಾದ ರಸ್ತೆ ಇದ್ದು ಡಾಂಬರೀಕರಣ ಸಮಯದಲ್ಲಿ ವಾಹನ ಸಂಚಾರ ಮಾಡಲು ಜಾಗವಿಲ್ಲದ ಹಿನ್ನಲೆ, ಮಾರ್ಚ್ 5 ರಿಂದ 15 ರವರೆಗೆ ಆಗುಂಬೆ ಘಾಟಿಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗದ ವಿವರ : ಲಘು ವಾಹನಗಳು, ಉಡುಪಿ-ಕಾರ್ಕಳ-ಮಾಳಾಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾ.ಹೆ 169) ಮಾರ್ಗವಾಗಿ ಹಾಗೂ ಭಾರೀ ವಾಹನಗಳು, ಉಡುಪಿ-ಕುಂದಾಪುರ-ಸಿದ್ಧಾಪುರು-ಹೊಸoಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಮಾರ್ಗವಾಗಿ ಸಂಚರಿಸುವoತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
