ಉಡುಪಿ: ಇಂದ್ರಾಳಿ-ಸಗ್ರಿ  ಹೊಸ ಕಿರು ಸೇತುವೆ  9.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ : ಯಶಪಾಲ್ ಸುವರ್ಣ – vishwanews24

Featured, ಉಡುಪಿ

ಉಡುಪಿ: ಇಂದ್ರಾಳಿ-ಸಗ್ರಿ  ಹೊಸ ಕಿರು ಸೇತುವೆ  9.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ :  ಯಶಪಾಲ್ ಸುವರ್ಣ

ಉಡುಪಿ: ಮೂಡುಸಗ್ರಿ ವಾರ್ಡ್ನ ಇಂದ್ರಾಳಿ-ಸಗ್ರಿ ಶಾಲಾ ಸಂಪರ್ಕ ರಸ್ತೆಯಲ್ಲಿ ಕುಸಿದಿರುವ ಚಿಕ್ಕ ಸೇತುವೆಯ ಸ್ಥಳಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೇತುವೆಯ ಹಾನಿಯಿಂದಾಗಿ ಸೇತುವೆಯನ್ನು ಮುಚ್ಚಚಾಗಿದ್ದು, ಇದರಿಂದ ಪ್ರದೇಶದ ಸಾರ್ವಜನಿಕರು ತುಂಬಾ ಅನಾನುಕೂಲಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸ್ಪಂದಿಸಿದ ಯಶ್ಪಾಲ್ ಸುವರ್ಣ ಅವರು ಹೊಸ ಕಿರು ಸೇತುವೆ ನಿರ್ಮಾಣಕ್ಕೆ ನಗರಸಭೆ ಮೂಲಕ ಈಗಾಗಲೇ 9.50 ಲಕ್ಷ ರೂ. ಮಂಜೂರು ಮಾಡಲಾಗಿದೆ. ಕೂಡಲೇ ಅಧಿಕಾರಿಗಳು ಕಾಮಗಾರಿ ಆರಂಭಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಮೂರು ವರ್ಷದಲ್ಲಿ ನಾಲ್ಕು ಮದುವೆ ; ವಂಚಿಸಿ, ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿ ಆದ ಖತರ್ನಾಕ್ ಮಹಿಳೆ – vishwanews24

ಈ ಸಂದರ್ಭ ನಗರಸಭೆ ಸದಸ್ಯೆ ಭಾರತಿ ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪಕ್ಷದ ಮುಖಂಡರಾದ ಪ್ರಶಾಂತ್, ಹೇಮಂತ್, ಸದಾನಂದ ನಾಯಕ್, ಸುಮಾ ನಾಯಕ್, ನಗರಸಭೆ ಎಇಇ ದುರ್ಗಾಪ್ರಸಾದ್, ಎಂಜಿನಿಯರ್ ಚೇತನ್ ಇದ್ದರು.

Leave a Reply