ಉಡುಪಿ ಉಚ್ಚಿಲ ದಸರಾ- 2026 : ಅ. 21ರಂದು ವಿಜಯದಶಮಿ, ಮಹಾ ಚಂಡಿಕಾಯಾಗ ಮತ್ತು ಶೋಭಾಯಾತ್ರೆ – vishwanews24

Featured, ಉಡುಪಿ

ಉಡುಪಿ ಉಚ್ಚಿಲ ದಸರಾ- 2026 : ಅ. 21ರಂದು ವಿಜಯದಶಮಿ, ಮಹಾ ಚಂಡಿಕಾಯಾಗ ಮತ್ತು ಶೋಭಾಯಾತ್ರೆ

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ- 2026 ಮಹೋತ್ಸವವು ಅಂತಿಮ ಹಂತ ತಲುಪಿದೆ. ಅ. 20ರಂದು ಮಹಾನವಮಿ, ಅ. 21ರಂದು ವಿಜಯದಶಮಿ, ಮಹಾ  ಚಂಡಿಕಾಯಾಗ, ಶೋಭಾಯಾತ್ರೆ ನಡೆಯಲಿದೆ.

ಅ. 20ರಂದು ಬೆಳಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ನವದುರ್ಗೆಯರಿಗೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ ನವದುರ್ಗೆ ಯರಿಗೆ ಮಹಾಪೂಜೆ, ಕಲ್ಪೋಕ್ತ ಪೂಜೆ ನೆರವೇರಲಿದೆ. ದಸರಾ ಮುಖ್ಯ ವೇದಿಕೆಯಲ್ಲಿ ಬೆಳಗ್ಗೆ 9.30ರಿಂದ ಭಜನ ಸಂಕೀರ್ತನೆ, ಅಪರಾಹ್ನ 2.30ರಿಂದ ಭಕ್ತಿಗಾನಸುಧೆ, ಸಂಕೀರ್ತನೆ ನಡೆಯಲಿದೆ. ಸಂಜೆ 5ಕ್ಕೆ ಧರ್ಮಸಭೆಯಲ್ಲಿ ಧಾರ್ಮಿಕ ಪ್ರವಚನ ನಡೆಯಲಿದೆ. ರಾತ್ರಿ 7ರಿಂದ ರಥಬೀದಿ ಸುತ್ತ ಸಾಮೂಹಿಕ ದಾಂಡಿಯಾ ರಾಸ್‌, ರಾತ್ರಿ 8.30ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.

ಉಡುಪಿ: ಅ. 23ರಂದು ಎಸ್ಐಆರ್ ವಿರುದ್ಧ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ – vishwanews24

ನಾಳೆ ಮಹಾಚಂಡಿಕಾ ಯಾಗ, ಅನ್ನಸಂತರ್ಪಣೆ
ಅ. 21ರಂದು ಬೆಳಗ್ಗೆ ಉದಯಪೂಜೆ, ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಸಾಮೂಹಿಕ ಚಂಡಿಕಾಯಾಗ, ಪೂರ್ಣಾಹುತಿ, ಪ್ರಸಾದ ವಿತರಣೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಶಾರದಾ ಮಾತೆ, ನವದುರ್ಗೆಯರ ವಿಗ್ರಹಗಳಿಗೆ ಅಪರಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ, ಅಪರಾಹ್ನ 3.30ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ.

ಮಂಗಳೂರು: ಕೆಮಿಕಲ್ ಹೋಲ್ಡರ್ ಡೆಲಿವರಿ ನೆಪದಲ್ಲಿ ಅಪರಿಚಿತರಿಂದ ₹1.18 ರೂ. ಲಕ್ಷ ವಂಚನೆ – vishwanews24

Leave a Reply