ಉಡುಪಿ: ಕಲ್ಸಂಕದ ಬಳಿ ಹಾಳುಬಿದ್ದ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ – Vishwanews24
ಉಡುಪಿ: ಉಡುಪಿ: ಕಲ್ಸಂಕದ ಬಳಿ ಹಾಳುಬಿದ್ದ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಉಡುಪಿ: ಕಲ್ಸಂಕದ ಬಳಿ ಇರುವ ಪಾಳುಬಿದ್ದಿರುವ ಕನಕ ಮಹಲ್ ಎಂಬ ಬಹುಮಹಡಿ ಕಟ್ಟಡದ ನೆಲ ಅಂತಸ್ತಿನಲ್ಲಿ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಶವವು ಗುರುತು ಸಿಗದಷ್ಟು ಕೊಳೆತು ಹೋಗಿದ್ದು, ವ್ಯಕ್ತಿ ಮೃತಪಟ್ಟು ಕೆಲವು ದಿನಗಳು ಕಳೆದಿರಬಹು ದೆಂದು ಶಂಕಿಸಲಾಗಿದೆ.ಸಾವಿನ ಕಾರಣ ಪೋಲಿಸ್ ತನಿಖೆಯಿಂದ ತಿಳಿಯಬೇಕಾಗಿದೆ.ಮೃತನ ಸಂಬಂಧಿಕರು ಉಡುಪಿ ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಘಟನಾ ಸ್ಥಳದಲ್ಲಿದ್ದು ಉಪನಿರೀಕ್ಷಕರಾದ ಭರತೇಶ್ ಕಂಕನಾಡಿ ಕಾನೂನು ಪ್ರಕ್ರಿಯೆ ನಡೆಸಿದರು.ನೇತ್ರಾವತಿ ಹೆಡ್ಕಾನ್ಸ್ ಟೇಬಲ್, ಸಿಬ್ಬಂದಿಗಳಾದ ಜಾಸ್ವ, ಮಲ್ಲಯ್ಯ ಸ್ಥಳದಲ್ಲಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕಳೇಬರವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.ಸುನಿಲ್ ಬೈಲಕೆರೆ ಹಾಗೂ ಕಲ್ಸಂಕ ಆಟೋಚಾಲಕರು ಸಹಕರಿಸಿದರು.
ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆಯಿಂದ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ – Vishwanews24
ಕಟ್ಟಡದ ನಿರ್ಮಾಣ ಕಾಮಗಾರಿಯುಸ್ಥಗಿತಗೊಂಡು ಹಲವು ವರ್ಷಗಳು ಕಳೆದಿವೆ.ಕಟ್ಟಡದ ಸುತ್ತ ತಡೆ ಬೇಲಿಯಿಲ್ಲ. ಇಲ್ಲಿ ಈಗಾಗಲೇ ಹತ್ತಾರು ಕೊಳೆತ ಶವಗಳು ಸಿಕ್ಕಿರುವ ಘಟನೆಗಳು ನಡೆದಿವೆ. ಇದೊಂದು ಭಯಾನಕ ಕಟ್ಟಡವಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಈ ಸ್ಥಳದಲ್ಲಿ ಸಾರ್ವಜನಿಕರು ಒಳ ನುಸುಳದಂತೆ ತಡೆಗೊಡೆ ನಿರ್ಮಿಸುವಂತೆ ಸ್ಥಳದ ಮಾಲಿಕರಿಂದ ಮಾಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.
