ಉಡುಪಿ : ಎರಡನೇ ದಿನದ ದ್ವಿತೀಯ ಪಿಯುಸಿ ಪರೀಕ್ಷೆ : ಮೂವರು ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆಗೆ ಗೈರು – Vishwanews24
ಎರಡನೇ ದಿನದ ದ್ವಿತೀಯ ಪಿಯುಸಿ ಪರೀಕ್ಷೆ : ಮೂವರು ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆಗೆ ಗೈರು – Vishwanews24
ಉಡುಪಿ: ಎರಡನೇ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಶಾಂತ ರೀತಿಯಲ್ಲಿ ಆರಂಭವಾಗಿದ್ದು, ಯಾವುದೇ ಗೊಂದಲಗಳು ಉಂಟಾಗಲಿಲ್ಲ. ಆದರೆ ಪರೀಕ್ಷೆಗೆ ಹಿಜಾಬ್ ಹೋರಾಟಗಾರ್ತಿಯರೆಲ್ಲರೂ ಗೈರಾಗಿದ್ದಾರೆ.
ಇಂದು ವಿಜ್ಞಾನ ವಿಭಾಗದ ಪರೀಕ್ಷೆ ಆರಂಭವಾಗಿದ್ದು, ಗಣಿತ ಪರೀಕ್ಷೆ ನಡೆಯುತ್ತಿದೆ. ಉಡುಪಿಯ ಮೂವರು ಹಿಜಾಬ್ ಹೋರಾಟಗಾರ್ತಿಯರು ಗಣಿತ ಪರೀಕ್ಷೆ ಎದುರಿಸಬೇಕಿತ್ತಾದರೂ, ಅಲ್ಮಾಸ್, ಹಜ್ರಾ, ಆಯೇಷಾ ಎಂಬ ಮೂವರೂ ಗೈರಾಗಿದ್ದಾರೆ.
ಇವರು ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೂವರ ಪೈಕಿ ಹಜ್ರಾ ಹಾಗೂ ಆಯೆಷಾ ಹಾಲ್ ಟಿಕೆಟ್ನ್ನೇ ಪಡೆದುಕೊಂಡಿಲ್ಲ. ಆದರೆ ಅಲ್ಮಾಸ್ ಹಾಲ್ ಟಿಕೆಟ್ ಪಡೆದುಕೊಂಡಿದ್ದರೂ, ಪರೀಕ್ಷೆಗೆ ಗೈರಾಗಿದ್ದಾರೆ.
ಶುಕ್ರವಾರ ದ್ವಿತೀಯ ಪಿಯು ಕಾಮರ್ಸ್ ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಹಾಗೂ ರೇಶಮ್, ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೆ ಮನೆಗೆ ವಾಪಾಸ್ಸಾಗಿದ್ದರು.
