ಉಡುಪಿ:  ಏರ್ ಲಿಫ್ಟ್ ಮಾಡೋದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂ. ವಂಚನೆ – Vishwanews24

Featured, ಉಡುಪಿ

ಉಡುಪಿ:  ಏರ್ ಲಿಫ್ಟ್ ಮಾಡೋದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂ. ವಂಚನೆ

ಉಡುಪಿ; ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಏರ್ ಲಿಫ್ಟ್ ಮಾಡೋದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂದಾರ್ತಿಯ ಪ್ರಮೋದ್ ಕುಮಾರ್ ಶೆಟ್ಟಿ(39) ಎಂಬವರು ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಸೆ.4ರಂದು ಇವರಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ ತಾನು ರಾಜೇಶ್ ಶಾ, ಇರೋ ಬಾಂಡ್ ಕಂಪನಿಯ ಮಾಲೀಕನೆಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ತನ್ನ ಮಗನಿಗೆ ಕಾರವಾರ-ಗೋವಾ ಮಾರ್ಗದ ನಡುವೆ ರಸ್ತೆ ಅಪಘಾತವಾಗಿದ್ದು ಆತನನ್ನು ಏರ್‌ಲಿಫ್ಟ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ತುರ್ತಾಗಿ 3 ಲಕ್ಷ ರೂ. ಹಣ ಬೇಕಾಗಿದೆ. ಆದುದರಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದನು.

ಅದನ್ನು ನಂಬಿದ ಪ್ರಮೋದ್ ಅವರು ತನ್ನ ಗೆಳೆಯರಿಂದ ಒಟ್ಟು 3 ಲಕ್ಷ ರೂ. ಹಣವನ್ನು ಜಿಪೇ ಮೂಲಕ ವರ್ಗಾಯಿಸಿದ್ದು ಬಳಿಕ ಆತ ಮೋಸ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉಡುಪಿ :ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು – Vishwanews24

Leave a Reply