ಉಡುಪಿ : ಕನ್ನಡ ಸಾಹಿತ್ಯ ಲೋಕದ ಹಿರಿಯ ಚಿಂತಕ, ಪ್ರಖ್ಯಾತ ವಿಮರ್ಶಕ ಹಾಗೂ ಜನಪರ ಹೋರಾಟಗಾರ ಜಿ. ರಾಜಶೇಖರ್ ವಿಧಿವಶ – Vishwanews24

Featured, ಉಡುಪಿ

ಕನ್ನಡ ಸಾಹಿತ್ಯ ಲೋಕದ ಹಿರಿಯ ಚಿಂತಕ, ಪ್ರಖ್ಯಾತ ವಿಮರ್ಶಕ ಹಾಗೂ ಜನಪರ ಹೋರಾಟಗಾರ ಜಿ. ರಾಜಶೇಖರ್ ವಿಧಿವಶ

ಉಡುಪಿ: ಕನ್ನಡ ಸಾಹಿತ್ಯ ಲೋಕದ ಹಿರಿಯ ಚಿಂತಕ, ಪ್ರಖ್ಯಾತ ವಿಮರ್ಶಕ ಹಾಗೂ ಜನಪರ ಹೋರಾಟಗಾರರಾದ ಜಿ .ರಾಜಶೇಖರ್(75) ಅವರು ಅನಾರೋಗ್ಯದಿಂದ ಬುಧವಾರ ಉಡುಪಿಯ ಖಾಸಗಿ ಆಶ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ರಾಜಶೇಖರ್ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಆರೋಗ್ಯ ಗಂಭೀರವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ 11:15ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ್ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಉಡುಪಿ : ಟೋಲ್‍ಗೇಟ್‍ ಅಂಬುಲೆನ್ಸ್ ಅಪಘಾತ ಪ್ರಕರಣ : ಟೋಲ್‍ನಲ್ಲಿ ಮಲಗಿದ್ದ ಹಸು ತಪ್ಪಿಸಲು ಹೋಗಿ ಡಿಕ್ಕಿ : ಅಂಬುಲೆನ್ಸ್ ಚಾಲಕ – VIshwanews24

ರಾಜಶೇಖರ್ ಅವರು 1946ರಲ್ಲಿ ಜನಿಸಿದರು. ನಂತರ ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ಮುಗಿಸಿ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿ ನಂತರ ಎಲ್‍ಐಸಿಯಲ್ಲಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ -ಸಮಾಜ ಹಾಗೂ ಸಾಂಸ್ಕೃತಿಕ ರಾಜಕಾರಣ ಸೇರಿದಂತೆ ಅವರು ನಿರಂತರವಾಗಿ ಬರೆಯುತ್ತಿದ್ದರು. ಅಷ್ಟೇ ಅಲ್ಲದೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆಯೂ ಕೂಡ ಬರೆಯುತ್ತಿದ್ದರು.

ರಾಜಶೇಖರ ಅವರ ಬಹುವಚನ ಭಾರತ ಕೃತಿಗೆ 2015ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಆದರೆ ಅದನ್ನು ಅವರು ಸ್ವೀಕರಿಸಲು ನಿರಾಕರಿಸಿದ್ದರು.

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಲಿಪ್ ಲಾಕ್ ಕಿಸ್ಸಿಂಗ್ ಸ್ಪರ್ಧೆ: ವಿಡಿಯೋ ಮಾಡಿದ ವಿದ್ಯಾರ್ಥಿ ವಶಕ್ಕೆ – Vishwanews24

Leave a Reply