ಉಡುಪಿ: ಕಾಂಗ್ರೆಸ್ ನೈರುತ್ಯ ಶಿಕ್ಷಕರ ಕ್ಷೇತ್ರದ ಉಸ್ತುವಾರಿಯಾಗಿ ಪ್ರೊ. ಸುಧೀರ್ ಆರ್. ಹೆಗ್ಡೆ ನೇಮಕ – vishwanews24
ಉಡುಪಿ: ಕಾಂಗ್ರೆಸ್ ನೈರುತ್ಯ ಶಿಕ್ಷಕರ ಕ್ಷೇತ್ರದ ಉಸ್ತುವಾರಿಯಾಗಿ ಪ್ರೊ. ಸುಧೀರ್ ಆರ್. ಹೆಗ್ಡೆ ನೇಮಕ
ಉಡುಪಿ : ಮುಂಬರುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆಗೆ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲು ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಮಂಜುನಾಥ ಭಂಡಾರಿ ಅವರ ಶಿಫಾರಸಿನ ಮೇಲೆ ಬ್ರಹ್ಮಾವರ ಮಂದರ್ತಿಯ ಪ್ರೊ. ಸುಧೀರ್ ಆರ್. ಹೆಗ್ಡೆಯವರನ್ನು ನೇಮಕ ಮಾಡಲಾಗಿದೆ.
ಸುಧೀರ್ ಅವರನ್ನು ನೈರುತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ .ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
