ಉಡುಪಿ : ಕಾಪು ತಾಲೂಕು ಆಗಲೇಬೇಕು ಅಂತಾ ಅನುದಾನ ತಂದವರು ಸೊರಕೆಯವರು : ಸುಧೀರ್ ಮರೋಳಿ – VIshwanews24
ಉಡುಪಿ : ಕಾಪು ತಾಲೂಕು ಆಗಲೇಬೇಕು ಅಂತಾ ಅನುದಾನ ತಂದವರು ವಿನಯ ಕುಮಾರ್ ಸೊರಕೆ ..
ನಿಮ್ಮ ಜೊತೆ ಇದ್ದು ನಿಮ್ಮ ಸಮಸ್ಯಗೆ ಹೋರಾಟಕ್ಕೆ ಧ್ವನಿಯಾದವರು ವಿನಯ ಕುಮಾರ್ ಸೊರಕೆಯವರು
ಸೊರಕೆಯವರಿಗೆ ಮತ ನೀಡಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ
ಊರಿನ ಅಭಿವೃದ್ಧಿಗೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಸೊರಕೆಯವರು.. :ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ
ಉಡುಪಿ: ವಿದ್ಯಾರ್ಥಿ ಜೀವನದಲ್ಲೇ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಜನರಿಗೆ ಭೂಮಿಯ ಹಕ್ಕನ್ನು ಕೊಟ್ಟ ಏಕೈಕ ರಾಜಕಾರಣಿ ಇದ್ರೆ ಅದು ವಿನಯ ಕುಮಾರ್ ಸೊರಕೆ ಅಂತಾ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಪಡುಬಿದ್ರಿಯ ಕಂಚಿನಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜ ಸೇವಕರಂದರೆ ಸಮಾಜದ ಜೊತೆ ಇರಬೇಕು. ತನ್ನ ಸಮಾಜ ಸೇವೆಯ ಕಾರ್ಯದಲ್ಲಿ ವಿನಯತೆಯಿಂದ ವಿನಯವಂತರಾಗಿ ಕಳೆದ ಚುನಾವಣೆಯಲ್ಲಿ 5 ವರ್ಷಗಳ ಕಾಲ ಸೋಲಿಸಿ ರಜೆ ಕೊಟ್ಟರೂ ನಿಮ್ಮ ಜೊತೆ ಇದ್ದು ನಿಮ್ಮ ಸಮಸ್ಯಗೆ ಹೋರಾಟಕ್ಕೆ ಧ್ವನಿಯಾದವರು ವಿನಯ ಕುಮಾರ್ ಸೊರಕೆಯವರು ಮಾತ್ರ.
ಮತದಾನ ಮಾಡುವ ಸಂದರ್ಭ ಮತದಾರರಿಗೆ ಅಂಜಿಕೆ, ಅಳುಕು ಇರಬಾರದು. ಈ ಬಾರಿ ವಿನಯ ಕುಮಾರ್ ಸೊರಕೆಯವರಿಗೆ ಮತ ನೀಡಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಐವನ್ ಡಿಸೋಜ ಹೇಳಿದ್ದಾರೆ.
ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯ ಐ ಟಿ ಹಬ್ ಆಗಿ ರೂಪಿಸಲಿದ್ದೇವೆ : ಯಶ್ಪಾಲ್ ಸುವರ್ಣ – Vishwanews24
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ತಿನ್ನೋ ಉಪ್ಪಿಗೂ ಕೂಡಾ ಜಿಎಸ್ಟಿ ಯನ್ನು ಹಾಕಿ ಬಡವರನ್ನು ಮತ್ತೆ ಬಡತನಕ್ಕೆ ದೂಡಿದ ಬಿಜೆಪಿ ಸರ್ಕಾರ ಇದೀಗ ಅಭಿವೃದ್ಧಿಯ ಮಂತ್ರ ಜಪಿಸಿ ಜನರನ್ನು ಮರಳು ಮಾಡುವ ಕಾರ್ಯಕ್ಕೆ ಕೈ ಹಾಕಿದೆ.
ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮೂಲಕ 13 ಸಾವಿರ ಕೋಟಿ ರೂ ಗುಳುಂ ಮಾಡಲಾಗಿದೆ. ಬಿಜೆಪಿಗೆ ವಿನಯ ಕುಮಾರ್ ಸೊರಕೆಯವರನ್ನು ದೂಷಿಸಲು ಯಾವುದೇ ಕಾರಣಗಳು ಸಿಗ್ತಾ ಇಲ್ಲ. ಧರಿಸುವ ಬಟ್ಟೆಯಷ್ಟು ಶುಭ್ರವಾಗಿದೆ ಅವರ ವ್ಯಕ್ತಿತ್ವ. ಜನರ ವಿಶ್ವಾಸಕ್ಕೆ ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ. ಕಾಪುವಿನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿದೆ.
ಊರಿನ ಅಭಿವೃದ್ಧಿಗೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಸೊರಕೆಯವರು. ಪಕ್ಷದ ಆಂತರಿಕ ಕಾರಣಕ್ಕಾಗಿ ಮಂತ್ರಿ ಸ್ಥಾನ ಹೋದ್ರು ಬೇಸರ ಪಡಿಸದೆ ಕಾಪು ತಾಲೂಕು ಆಗಲೇಬೇಕು ಅಂತಾ ಅನುದಾನ ತಂದವರು.ಪ್ರಾಂಜಲ ಮನಸ್ಸಿನಿಂದ ಪ್ರೀತಿಯಿಂದ ಮಮತೆಯಿಂದ ಸೊರಕೆಯವರ ಪರ ಕಾರ್ಯಕರ್ತರಯ ಕೆಲಸ ಮಾಡಬೇಕಿದೆ. ಸೊರಕೆಯವರ ವಿರೋಚಿತ ಗೆಲುವಿಗಾಗಿ ಕಟಿಬದ್ಧರಾಗಿ ಎಲ್ಲಾ ಸೇರಿ ಹಗಲಿರುಳು ದುಡಿಯಬೇಕು. ಸೋತ ಮೇಲೂ ಅತಿ ಹೆಚ್ಚು ಜನ ಸಂಪರ್ಕವನ್ನು ಇಟ್ಟುಕೊಂಡ ಸೊರಕೆಯವರನ್ನು ಕಾಪುವಿನಜನ ಕಾಪಾಡಿಕೊಳ್ತಾರೆ. ಅನ್ನೋ ನಂಬಿಕೆ ಇದೆ ಅಂತಾ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಕೋಟ್ಯಾನ್, ನವೀನ ಚಂದ್ರ ಶೆಟ್ಟಿ,ನವೀನ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್, ರಮೀಜ್, ವಿಶ್ವಾಸ್ ಅಮೀನ್, ಜಿತೇಂದ್ರ ಫುಟಾರ್ಡೊ,ಶೇಖರ ಹೆಜ್ಮಾಡಿ, ಕರುಣಾಕರ ಪೂಜಾರಿ, ಸುಧೀರ್ ಕರ್ಕೇರ, ಯಶವಂತ್,ಅಖಿಲೇಶ್ ಕೋಟ್ಯಾನ್,ದೇವಿ ಪ್ರಸಾದ್ ಶೆಟ್ಟಿ, ಶರ್ಪುದ್ದೀನ್ ಶೇಖ್, ದೀಪಕ್ ಕುಮಾರ್ ಎರ್ಮಾಳ್,ಸುಕುಮಾರ್, ಅಜೀಜ್, ರಮೀಜ್ ಉಪಸ್ಥಿತರಿದ್ದರು.
