ಉಡುಪಿ: ಕಾರಿನಲ್ಲಿ ಬೆಂಕಿಹಚ್ಚಿ ಬೆಂಗಳೂರಿನ ಜೋಡಿ ಆತ್ಮಹತ್ಯೆ ಪ್ರಕರಣ : ಇಂದ್ರಾಳಿಯಲ್ಲಿ ಅಂತ್ಯಸಂಸ್ಕಾರ – VIshwnaews24

Featured, ಉಡುಪಿ

ಉಡುಪಿ: ಕಾರಿನಲ್ಲಿ ಬೆಂಕಿಹಚ್ಚಿ ಬೆಂಗಳೂರಿನ ಜೋಡಿ ಆತ್ಮಹತ್ಯೆ ಪ್ರಕರಣ : ಇಂದ್ರಾಳಿಯಲ್ಲಿ ಅಂತ್ಯಸಂಸ್ಕಾರ

ಉಡುಪಿ : ಉಡುಪಿಯಲ್ಲಿ ಬೆಂಗಳೂರಿನ ಜೋಡಿ ಕಾರಿನಲ್ಲಿ ಬೆಂಕಿಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ನಿನ್ನೆ ತಡರಾತ್ರಿ ಆಗಮಿಸಿದ್ದ ಎರಡು ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ಬೆನ್ನಲ್ಲೆ ಶವದ ಅಂತ್ಯಸಂಸ್ಕಾರ ಪೂರ್ಣಗೊಳಿಸಿದ್ದಾರೆ.

ಕಾರಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯಶವಂತ್ ಮತ್ತು ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದರು.ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬೆನ್ನಲ್ಲೇ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಿ, ಇಂದ್ರಾಳಿಯ ಸ್ಮಶಾನದಲ್ಲಿ ರಾತ್ರಿ ಒಂದು ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಶವ ಸಂಪೂರ್ಣ ಸುಟ್ಟು ಕರಕಲಾದ ಕಾರಣ ಉಡುಪಿಯಲ್ಲಿ ಶವಸಂಸ್ಕಾರ ನೆರವೇರಿಸಿದ್ದು ಅಂತಿಮ ಸಂಸ್ಕಾರ ಪೂರೈಸಿ ಬೂದಿ ಕೊಂಡೊಯ್ದಿದಿದ್ದಾರೆ ಎಂದು ತಿಳಿದುಬಂದಿದೆ.

ಗೋಮಾಂಸ ತಿನ್ನಬೇಕು ಅನ್ನಿಸಿದರೆ ನಾನು ತಿನ್ನುತ್ತೇನೆ : ಸಿದ್ದರಾಮಯ್ಯ -Vishwanews24

Leave a Reply