ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ – vishwanews24

Featured, ಉಡುಪಿ

ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ

ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೋಪಕರಣಗಳು
ಲಭ್ಯವಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈತರು ಜಮೀನಿನ ಆರ್.ಟಿ.ಸಿ, ಆಧಾರ್ ಪ್ರತಿ, 2 ಪಾಸ್ ಪೋರ್ಟ್ ಸೈಜಿನ ಭಾವಚಿತ್ರ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಪತ್ರ, ಪ.ಜಾ ಮತ್ತು ಪ.ಪಂ.
ಇದ್ದಲ್ಲಿ ಪ್ರಮಾಣ ಪತ್ರ ಹಾಗೂ ರೂ. 100/- ಛಾಪಾ ಕಾಗದಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಸದ್ರಿ ಸೌಲಭ್ಯದ ಪ್ರಯೋಜನ ಪಡೆಯಲು ರೈತರು ಕಡ್ಡಾಯವಾಗಿ ಪ್ರೂಟ್ಸ್ ಐಡಿ ಯನ್ನು ಹೊಂದಿರಬೇಕು. ರೈತರು ಈಗಾಗಲೇ ಪ್ರೂಟ್ಸ್ ಐಡಿ
ಯನ್ನು ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಆರ್.ಟಿ.ಸಿ ಗಳನ್ನು ಪ್ರೂಟ್ಸ್ ಐಡಿಗೆ ಜೋಡಣೆ ಮಾಡಿಕೊಳ್ಳುವಂತೆ ಉಡುಪಿ
ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply