ಉಡುಪಿ: ಕೆಸರು ತೆಗೆದು ಸ್ವಚ್ಚ ಮಾಡಲೆಂದು ಬಾವಿಗೆ ಇಳಿದ ಓರ್ವ ಸಾವು, ಮತ್ತೋರ್ವನ ರಕ್ಷಣೆ – Vishwanews24

Featured, ಉಡುಪಿ

ಉಡುಪಿ: ಕೆಸರು ತೆಗೆದು ಸ್ವಚ್ಚ ಮಾಡಲೆಂದು ಬಾವಿಗೆ ಇಳಿದ ಓರ್ವ ಸಾವು, ಮತ್ತೋರ್ವನ ರಕ್ಷಣೆ

ಉಡುಪಿ: ಕೆಸರು ತೆಗೆದು ಸ್ವಚ್ಚ ಮಾಡಲೆಂದು ಬಾವಿಗೆ ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವನ್ನಪ್ಪಿದರೆ ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಸಂಜೆ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ನಡೆದಿದೆ.

ದುರ್ಗೇಶ್ (34) ಮೃತಪಟ್ಟವರು. ಅಡಿವೆಪ್ಪ ಕುರಿ (50) ರಕ್ಷಣೆಗೊಳಗಾದವರು. ಇಬ್ಬರು ಕೂಡ ಕೊಪ್ಪಳ ಜಿಲ್ಲೆಯವರಾಗಿದ್ದು, ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು.

ಸುಳ್ಯ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ – Vishwanews24

35 ಅಡಿ ಆಳದ ಬಾವಿಯಲ್ಲಿ ಕೆಸರು ಇದೆ ಎಂದು ಬಾವಿಯೊಳಗೆ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛ ಮಾಡುತ್ತಿದ್ದರು. ಈ ವೇಳೇ ಘಟನೆ ನಡೆದಿದೆ. ಆಮ್ಲಜನಕ ಕೊರತೆಯಾಗಿರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply