ಉಡುಪಿ: ಕೋ ಆಪರೇಟಿವ್ ಬ್ಯಾಂಕ್ ನಿಂದ ಅನ್ಯಾಯ  : ನ್ಯಾಯ ಕೊಡಿಸುವಂತೆ ಸಂತ್ರಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ – vishwanews24

Featured, ಉಡುಪಿ

ಉಡುಪಿ: ಕೋ ಆಪರೇಟಿವ್ ಬ್ಯಾಂಕ್ ನಿಂದ ಅನ್ಯಾಯ  : ನ್ಯಾಯ ಕೊಡಿಸುವಂತೆ ಸಂತ್ರಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ನಗರದ ಮಲ್ಪೆಯಲ್ಲಿರುವ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನಿಂದ ಅನ್ಯಾಯ ಆಗಿರುವ ಸಂತ್ರಸ್ತರು ಇಂದು ಉಡುಪಿ ಮಣಿಪಾಲದ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯ ತನಕ ಪಾದಯಾತ್ರೆ ಮಾಡಿ ಸಂತ್ರಸ್ಥ ರಿಂದ ಜಿಲ್ಲಾಧಿಕಾರಿ ಇವರಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡುವ ಮೂಲಕ ಭ್ರಷ್ಟಾಚಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತೆ ಬಿಂದುರವರು ಮೂರು ನಾಲ್ಕು ಜನ ಜೀಪಿನಲ್ಲಿ ಬಂದು ಹಣ ಕಟ್ಟಬೇಕು, ಕಾಲಿ ಪೇಪರ್ ನಲ್ಲಿ ಸಹಿ ಹಾಕಿ ಎಂದು ತುಂಬಾನೆ ಟಾರ್ಚಾರ್ ನಿಡ್ತಾ ಇದ್ದಾರೆ ನಾನು ಸೊಸೈಟಿಯಿಂದ ತೆಗೆದುಕೊಂಡದ್ದು ಕೇವಲ ಇಪ್ಪತ್ತು ಸಾವಿರ ಮಾತ್ರ ಆದರೆ ಈಗ ಅವರು ಎರಡು ಲಕ್ಷ ಕಟ್ಟುಂವಂತೆ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ, ಇವರ ಬೆದರಿಕೆಗೆ ಅಂಜಿ ಈಗಾಗಲೇ ಎಪ್ಪತ್ತು ಸಾವಿರ ಹಣವನ್ನು ಸಹ ಕಟ್ಟಿದ್ದೇನೆ ಈ ರೀತಿ ನನಗೆ ಮಾತ್ರವಲ್ಲ ಇತರರಿಗೂ ಹಣ ಕಟ್ಟುವಂತೆ ಬೆದರಿಸುತ್ತಿದ್ದಾರೆ ನಮಗೆ ನ್ಯಾಯವನ್ನು ದೊರಕಿಸಿ ಕೊಡಿ ಎಂದು ಹೇಳಿದರು.

ಉಡುಪಿ: ಆರೋಪಿಗಳಿಂದ  ಬಾಲಕೃಷ್ಣ ಪೂಜಾರಿ ಹತ್ಯೆಗೆ ಐದು ತಿಂಗಳ ಹಿಂದೆಯೆ ಯೋಜನೆ : ಪೊಲೀಸ್ ತನಿಖೆಯಿಂದ ಬಯಲು – vishwanews24

ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಮಾತನಾಡಿ, ಈ ರೀತಿ ಸಾಲದ ಹೆಸರಿನಲ್ಲಿ 1413 ಮಂದಿಗೆ 28 ಕೋಟಿ ರೂ. ಹಣವನ್ನು ಮೋಸ ಮಾಡಲಾಗಿದೆ. ಈ ಮೋಸದ ಜಾಲದಲ್ಲಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರಗಿಸಬೇಕು. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ವ್ಯವಸ್ಥಾಪಕರ ಆತ್ಮಹತ್ಯೆಗೆ ಕಾರಣರಾದವರನ್ನು ಉನ್ನತ ಮಟ್ಟದ ತನಿಖೆ ನಡೆಸಿ ಮೋಸ ಹೋದವರಿಗೆ ಹಾಗೂ ಮೃತ ವ್ಯವಸ್ಥಾಪಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸಭೆಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್, ಸುನಿಲ್ ಬಂಗೇರ ಉಪಸ್ಥಿತರಿದ್ದರು.

ಉಡುಪಿ: ಆರೋಪಿಗಳಿಂದ  ಬಾಲಕೃಷ್ಣ ಪೂಜಾರಿ ಹತ್ಯೆಗೆ ಐದು ತಿಂಗಳ ಹಿಂದೆಯೆ ಯೋಜನೆ : ಪೊಲೀಸ್ ತನಿಖೆಯಿಂದ ಬಯಲು – vishwanews24

Leave a Reply