ಉಡುಪಿ: ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದು ಪ್ರಚಾರದಲ್ಲಿ ಮಾತ್ರ ಹಿಂದೆ ಉಳಿದಿದ್ದೇನೆ : ಶೋಭಾ ಕರಂದ್ಲಾಜೆ  – Vishwanews24

Featured, ಉಡುಪಿ

ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ನಂಬಿಕೆ ಇದ್ದರೆ ತಕ್ಷಣ ಪಾಕಿಸ್ತಾನ ಜಿಂದಾಬಾದ್ ಅಂದವರನ್ನು ಅರೆಸ್ಟ್ ಮಾಡಿ..

ಪಾಕಿಸ್ತಾನ ಜಿಂದಾಬಾದ್ ಪ್ರಕರಣವನ್ನು ಎನ್​ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ ..

ಈ ಬಾರಿ ಎಲ್ಲಾ ಕಡೆಯಲ್ಲೂ ಕಮಲದ ಚಿಹ್ನೆ ಹಾಗೂ ಪ್ರದಾನಿ ಮೋದಿಯೇ ಕ್ಯಾಂಡಿಡೇಟ್‌

ನನ್ನ ವಿರುದ್ಧ ಪೂರ್ವನಿಯೋಜಿತವಾಗಿ ಪತ್ರ ಅಭಿಯಾನ ನಡೆಸಿದ್ದಾರೆ..

ಉಡುಪಿ: ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಆರೋಪ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಕಾಂಗ್ರೆಸ್‌ನ ಮೆಂಟಾಲಿಟಿ ಪಾಕಿಸ್ತಾನದ ಪರ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ನಂಬಿಕೆ ಇದ್ದರೆ ತಕ್ಷಣ ಪಾಕಿಸ್ತಾನ ಜಿಂದಾಬಾದ್ ಅಂದವರನ್ನು ಅರೆಸ್ಟ್ ಮಾಡಿ ಎಂದು ಒತ್ತಾಯ ಮಾಡಿದರು.

ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದು ಪ್ರಚಾರದಲ್ಲಿ ಮಾತ್ರ ಹಿಂದೆ ಉಳಿದಿದ್ದೇನೆ. ಆದ್ರೆ ಹಣ ಇದ್ದವರು ಏನು ಬೇಕಾದ್ರೂ ಮಾಡಬಹುದು ಅಂದು ಕೊಂಡು ನನ್ನ ವಿರುದ್ಧ ಪೂರ್ವನಿಯೋಜಿತವಾಗಿ ಪತ್ರ ಅಭಿಯಾನ ನಡೆಸಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ : ಸಿಎಂ  ಪ್ರತಿಕ್ರಿಯೆ  – Vishwanews24

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದೆ ಎಂದರು. ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ಯಾವುದೇ ಸರ್ಕಾರಕ್ಕೆ ಅಧಿಕಾರ ಶಾಶ್ವತವಲ್ಲ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಪ್ರಕರಣವನ್ನು ಎನ್​ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ. ಇದರ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು. ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನ ಬಂಧಿಸುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು

ಈ ಬಾರಿ ಎಲ್ಲಾ ಕಡೆಯಲ್ಲೂ ಕಮಲದ ಚಿಹ್ನೆ ಹಾಗೂ ಪ್ರದಾನಿ ಮೋದಿಯೇ ಕ್ಯಾಂಡಿಡೇಟ್‌. ಹಾಗಾಗಿ ಇಲ್ಲಿ ಅಭ್ಯರ್ಥಿ ಯಾರು ಅನ್ನೋದು ಮುಖ್ಯವಲ್ಲ. ಹಣ ಇದ್ದವರೇ ಪ್ರಧಾನಿ ಆಗಬೇಕು, ಸಂಸದ ಆಗಬೇಕು ಅಂತಿದ್ದರೆ, ಟಾಟಾ ಬಿರ್ಲಾ ಅದಾನಿ ಅಂಬಾನಿಯಂತವರೇ ಆಗ್ತಾ ಇದ್ರು ಒಬ್ಬ ಚಾಯ್‌ವಾಲ ಪ್ರಧಾನಿ ಆಗ್ತಾ ಇರಲಿಲ್ಲಿ ಎಂದು ಹೇಳಿದ್ದಾರೆ.

ಪಿಹೆಚ್ ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣ ; ಪತ್ತೆಗಾಗಿ ಮನವಿ ಮಾಡಿದ ಅರುಣ್ ಪುತ್ತಿಲ – Vishwanews24

ನನ್ನಂಥ ಸಾಮಾನ್ಯ ಕುಟುಂಬದಿಂದ ಬಂದವರು ದುಡ್ಡು ಇಲ್ಲದವರು ಸಂಸದರಾಗಿದ್ದಾರೆ ಅನ್ನೊದೆ ಬಿಜೆಪಿಯ ಹೆಗ್ಗಳಿಕೆ ಎಂದಿದ್ದಾರೆ. ಇನ್ನು ಇದೇ ವೇಳೆ ಚಿಕ್ಕಮಗಳೂರಿನಲ್ಲಿ ನಡೆದ ಪತ್ರ ಚಳುವಳಿಯನ್ನು ಟೀಕಿಸಿದ ಅವರು ಒಬ್ಬರೇ ಹತ್ತು ಇಪ್ಪತ್ತು ಪತ್ರ ಬರೆದು ಹಾಕಿದ್ದಾರೆ ಅಂದ್ರೆ ಅದರ ಹಿಂದೆ ಇರುವ ಉದ್ದೇಶ ಏನು ಅನ್ನೋದು ಸ್ಪಷ್ಟ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Leave a Reply