ಉಡುಪಿ : ಗಂಗೊಳ್ಳಿಯಲ್ಲಿ ಅ. 1 ರಂದು ಮದ್ಯ ಮಾರಾಟ ನಿಷೇಧ -Vishwanews24

Featured, ಉಡುಪಿ

ಉಡುಪಿ : ಗಂಗೊಳ್ಳಿಯಲ್ಲಿ ಅ. 1 ರಂದು ಮದ್ಯ ಮಾರಾಟ ನಿಷೇಧ

ಉಡುಪಿ, : ಗಂಗೊಳ್ಳಿಯಲ್ಲಿ ಅಕ್ಟೋಬರ್ 1 ರಂದು ಗೋ ಹತ್ಯೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ವತಿಯಿಂದ ,ಗಂಗೊಳ್ಳಿ ಬಂದರು ನಿಂದ ರಾಮಮಂದಿರದ ವರೆಗೆ ಮೆರವಣಿಗೆ ಮಾಡಿ, ವೀರೇಶ್ವರ ದೇವಸ್ಥಾನದಲ್ಲಿ ಸಭೆ ನಡೆಯಲಿದ್ದು ,ಸಮಾರಂಭದಲ್ಲಿ ಸುಮಾರು 5000 ಜನ ಭಾಗವಹಿಸುವ ನಿರೀಕ್ಷೆಯಿದ್ದು, ಈ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ , ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು,ತ್ರಾಸಿ, ಗ್ರಾಮದ ವ್ಯಾಪ್ತಿಯಲ್ಲಿನ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಬಾರ್ ಅಂಡ್ ರೆಸ್ಟೊರೆಂಟ್, ವೈನ್ ಶಾಪ್ ಗಳನ್ನು ಅಕ್ಟೋಬರ್ 1 ರ ಬೆಳಗ್ಗೆ 6 ಗಂಟೆಯಿ೦ದ ರಾತ್ರಿ 11 ರ ವರೆಗೆ ಸಂಪೂರ್ಣವಾಗಿ ಮುಚ್ಚುವಂತೆ ಸೂಚಿಸಿ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಿ , ಸದ್ರಿ ದಿನವನ್ನು ಡ್ರೈ ಡೇ ಎಂದು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.