ಉಡುಪಿ : ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಗೆ ವೇಷ ಧರಿಸಿ ಒಂದೇ ದಿನದಲ್ಲಿ 10 ಲಕ್ಷ ಸಂಗ್ರಹಿಸಿ ಕೊಟ್ಟ ಯೂಟ್ಯೂಬರ್, ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿ ತಂಡ – Vishwanews24

Featured, ಉಡುಪಿ

ಉಡುಪಿ : ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಗೆ ವೇಷ ಧರಿಸಿ ಒಂದೇ ದಿನದಲ್ಲಿ

10 ಲಕ್ಷ ಸಂಗ್ರಹಿಸಿ ಕೊಟ್ಟ ಯೂಟ್ಯೂಬರ್..

ಕಾಪು ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿ ತಂಡ..

ಉಡುಪಿ : ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಗೆ ವೇಷ ಧರಿಸಿ ಕರಾವಳಿಯ‌ ಖ್ಯಾತ ಯೂಟ್ಯೂಬರ್ ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿ 10 ಲಕ್ಷ ಸಂಗ್ರಹಿಸಿ ಕೊಟ್ಟಿದ್ದಾರೆ.

ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಯಕ್ಷಗಾನ ವೇಷವನ್ನು ಧರಿಸಿ ಒಂದೇ ದಿನದಲ್ಲಿ ಹತ್ತು ಲಕ್ಷರೂಪಾಯಿ ಸಂಗ್ರಹಿಸಿ ಬಾಲಕಿಗೆ ನೆರವು ನೀಡಿದ್ದಾರೆ.

ವೃತ್ತಿಯಲ್ಲಿ ಸಿನಿಮಾಟೋಗ್ರಾಫರ್ ಮತ್ತು ಪ್ರವೃತ್ತಿಯಲ್ಲಿ ಬೈಕ್ ರೈಡರ್, ಅಡ್ವೆಂಚರ್ಸ್ ಆಗಿರುವ ಕಾಪು ಮೂಲದ ಸಚಿನ್ ಶೆಟ್ಟಿ ಶಟರ್ ಬಾಕ್ಸ್ ಫಿಲಂಸ್ ಎಂಬ ಯೂಟ್ಯೂಬ್ ಚಾನಲ್‌ಅನ್ನೂ ಹೊಂದಿದ್ದು ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.

ಉಡುಪಿ: ಬಡ ಬಾಲಕಿಯ ಚಿಕಿತ್ಸೆಗೆ ಯಕ್ಷಗಾನ ವೇಷ ಧರಿಸಿ 10 ಲಕ್ಷ ರೂ. ಸಂಗ್ರಹಿಸಿದ  ಯೂಟ್ಯೂಬರ್ | Rs 10 lakh Collected by You Tuber for the Treatment of a Poor  girl in Udupi - Kannada Oneindia

ಉಡುಪಿ ಜಿಲ್ಲೆಯ ಹೆಬ್ರಿಯ ಕುಚ್ಚೂರು ಗ್ರಾಮದ ಚಂದ್ರ ನಾಯ್ಕ್ ಎಂಬುವವರ ಮಗಳಾದ ಹತ್ತು ವರ್ಷದ ಸಾನ್ವಿ ಎನ್ನುವ ಬಾಲಕಿ “ತಲಾಸೆಮಿಯಾ ಮೇಜರ್” ಎನ್ನುವ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದು “ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್” ಎನ್ನುವ ಚಿಕಿತ್ಸೆ ಮಾಡಬೇಕಿದೆ. ಈ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಬೇಕಾಗಿದೆ. ಬಡ ಕುಟುಂಬದ ಸಾನ್ವಿ ಹೆತ್ತವರಿಗೆ ಅಷ್ಟು ದೊಡ್ಡ ಮಟ್ಟದ ಹೊಂದಿಸುವುದು ಅಸಾಧ್ಯವಾಗಿದೆ. ಮನೆಯ ಬೆಳಕಾಗಿದ್ದ ಮಗಳ ಚಿಕಿತ್ಸೆಗೆ ಹಣ ಹೊಂದಿಸುವುದರ ಬಗ್ಗೆ ಚಿಂತಾಕ್ರಾಂತರಾದ ಸಾನ್ವಿ ಹೆತ್ತವರಿಗೆ ಸಚಿನ್ ಶೆಟ್ಟಿ ಸ್ನೇಹಿತ ವರ್ಗ ಈಗ ನೆರವಾಗಿದೆ.

Sachin S Shetty On His Long-Distance Bike Adventures, The Excitement and  More

ಸಮಾಜಮುಖಿ ಕಾರ್ಯದಲ್ಲೂ ತೊಡಗಿಕೊಂಡಿರುವ ಸಚಿನ್ ಶೆಟ್ಟಿ ಪುಟ್ಟ ಮಗುವಿನ ಪ್ರಾಣ ಉಳಿಸಲು ಮಾಡಿದ ಕಾರ್ಯ ಈಗ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸಚಿನ್ ಶೆಟ್ಟಿ, ಸುದೀಪ್ ಶೆಟ್ಟಿ, ಚೇತನ್ ಶೆಟ್ಟಿ, ನಿತೀಶ್ ಪೂಜಾರಿ ಸೇರಿದಂತೆ ಸ್ನೇಹಿತರ ವರ್ಗ ಕೃಷ್ಣ ಜನ್ಮಾಷ್ಟಮಿಯ ದಿನದಂದು ಯಕ್ಷಗಾನ ವೇಷ ಧರಿಸಿ ಉಡುಪಿ ಪೇಟೆಯಲ್ಲಿ ಸುತ್ತಾಡಿ ಮಗುವಿಗಾಗಿ ಹಣ ಸಂಗ್ರಹ ಮಾಡಿದೆ. ಅದನ್ನು ಕಳೆದ ಏಳು ವರ್ಷಗಳಿಂದ ಪ್ರತಿ ಕೃಷ್ಣ ಜನ್ಮಾಷ್ಟಮಿಯ ಸಂರ್ಭದಲ್ಲಿ ವಿವಿಧ ವೇಷ ಧರಿಸಿ ಬಡ ಮಕ್ಕಳಿಗೆ ಸಹಾಯ ಮಾಡುತ್ತಿರುವ ರವಿ‌ ಕಟಪಾಡಿ ಅವರ ಮೂಲಕ‌ ಬಾಲಕಿಯ‌ ಹೆತ್ತವರಿಗೆ‌ ನೀಡಿದ್ದಾರೆ.

ಸೆ.2ರ ‘ಪ್ರಧಾನಿ ಮಂಗಳೂರು ಬೇಟಿ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ: ಸಚಿವ ವಿ.ಸುನಿಲ್ ಕುಮಾರ್ – Vishwanews24

Leave a Reply