ಉಡುಪಿ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ -Vishwanews24

Featured, ಉಡುಪಿ

ಉಡುಪಿ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ -Vishwanews24

ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಕೆ ಎಸ್ ಗೌತಮ್ ಗೌಡ (23) ಹಾಗೂ ಬೆಳಗಾವಿ ನಿವಾಸಿ ವಿಕ್ಕಿ ದಯಾಳ್‌ ಅಲಿಯಾಸ್‌ ವಿಕ್ಕಿ (21) ಎಂದು ಗುರುತಿಸಲಾಗಿದೆ.

ಮಾ.16ರ ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಉಡುಪಿಯ ಕುಂಜಿಬೆಟ್ಟು ಕೆಇಬಿ ವಸತಿ ಗೃಹದ ಬಳಿ ಇರುವ ವಿಮಲಾ ಪದ್ಮನಾಭ ಕಟ್ಟಡದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ದೊರೆತ ಮಾಹಿತಿಯಂತೆ ಉಡುಪಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್ ಅವರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಗೆ ಮಾಲಧಾರಿಯಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ ಡಿಸಿಎಂ ಡಾ. ಸಿ. ಎನ್‌. ಅಶ್ವತ್ಥನಾರಾಯಣ -Vishwanews24

ಬಂಧಿತರಿಂದ ಕೆಂಪು ಪ್ಲಾಸ್ಟಿಕ್‌ ತೊಟ್ಟೆಯಲ್ಲಿದ್ದ 1,050 ಗ್ರಾಂ ತೂಕದ ಸುಮಾರು 30,000 ರೂ. ಮೌಲ್ಯದ ಗಾಂಜಾ, 20,000 ರೂ. ಮೌಲ್ಯದ ಎರಡು ಮೊಬೈಲ್‌‌‌ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಲಾಕ್ ಡೌನ್, ಸೀಲ್ ಡೌನ್, ನೈಟ್ ಕರ್ಪ್ಯೂ ಜಾರಿ ಮಾಡಲ್ಲ : ಸಚಿವ ಡಾ.ಕೆ. ಸುಧಾಕರ್ – Vishwanews24