ಉಡುಪಿ : ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ ; ನಾಳೆ ರೆಡ್ ಅಲರ್ಟ್ ಘೋಷಣೆ : ಮೀನುಗಾರರಿಗೆ ಕಡಿಲಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ – Vishwanews24
ಉಡುಪಿ : ಭಾರೀ ಮಳೆ ಸಾಧ್ಯತೆ ; ನಾಳೆ ರೆಡ್ ಅಲರ್ಟ್ ಘೋಷಣೆ : ಮೀನುಗಾರರಿಗೆ ಕಡಿಲಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ – Vishwanews24
ಉಡುಪಿ: ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಕೂಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾಧಾರಣ ಮಳೆ ಬೀಳುತ್ತಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಒಂದು ವಾರ ಭಾರೀ ಮಳೆಯಾಗುವ ಸೂಚನೆ ಕೊಟ್ಟಿದೆ.
ಮುಂದಿನ ನಾಲ್ಕು ದಿನ ಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸೆಪ್ಟೆಂಬರ್ 11ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಆರೆಂಜ್, 12ರಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿನ ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ರವಾನಿಸಲಾಗಿದೆ.
ಆಳ ಸಮುದ್ರ ಮೀನುಗಾರಿಕೆಗೆ ಈಗಾಗಲೇ ಸೇರಿರುವ ಸಮುದ್ರ ಮೀನುಗಾರಿಕೆ ಅರಬ್ಬಿ ಸಮುದ್ರ ಸೇರಿರುವ ಮೀನುಗಾರರಿಗೆ ವಯರ್ಲೆಸ್ ಮೂಲಕ ಸಂದೇಶ ರವಾನಿಸಲಾಗಿದೆ. ಭಾರಿ ಗಾಳಿ ಮಳೆ ಬೀಳುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಈ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿದಿನ 204 ಮಿ.ಮೀ. ಮಳೆ ನಿರೀಕ್ಷೆಯಿದ್ದು ಪ್ರತೀ ತಾಸಿಗೆ 45-50 ಕಿ.ಮೀ. ವೇಗದ ಗಾಳಿ ಬೀಸುವುದರಿಂದ ಮೀನುಗಾರರಿಗೆ ಕಡಿಲಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
