ಉಡುಪಿ: ಗೋ ಕಳ್ಳರ ಖತರ್ನಾಕ್ ಪ್ಲ್ಯಾನ್  : ಮದುವೆ ವಾಹನದಂತೆ ಶೃಂಗರಿಸಿದ ಇನೋವಾದ ಹಿಂದೆ  ಪಿಕಪ್ ವಾಹನದಲ್ಲಿ ದನ ಸಾಗಾಟ – Vishwanews24

Featured, ಉಡುಪಿ

ಉಡುಪಿ: ಗೋ ಕಳ್ಳರ ಖತರ್ನಾಕ್ ಪ್ಲ್ಯಾನ್  : ಮದುವೆ ವಾಹನದಂತೆ ಶೃಂಗರಿಸಿದ ಇನೋವಾದ ಹಿಂದೆ ಪಿಕಪ್ ವಾಹನದಲ್ಲಿ ದನ ಸಾಗಾಟ – Vishwanews24

ಉಡುಪಿ: ಪೊಲೀಸರು ಹಾಗೂ ಗೋರಕ್ಷರ ಕಣ್ಣಿಗೆ ಮಣ್ಣೆರಚಲು ಹೋಗಿ ಗೋ ಕಳವು ಖದೀಮರು ಜಾನುವಾರು ಸಾಗಾಟಕ್ಕೆ ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ದನ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಮದುವೆ ವಾಹನದಂತೆ ಸಿಂಗರಿಸಿದ ಇನೋವಾ ಕಾರನ್ನು ಎಸ್ಕಾರ್ಟ್ ಮಾಡಿಕೊಂಡು ದನ ಸಾಗಾಟ ಮಾಡಿರುವ ಘಟನೆ ನಡೆದಿದೆ.

ಶಿರ್ವ ವ್ಯಾಪ್ತಿಯ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಕಾರ್ಯಾಚರಣೆ ಮಾಡಿದ ವೇಳೆ ಮದುವೆ ವಾಹನದಂತೆ ಸಿಂಗರಿಸಿದ ಇನೋವಾ ಕಾರನ್ನು ಎಸ್ಕಾರ್ಟ್ ಮಾಡಿಕೊಂಡು ಪಿಕಪ್ ವಾಹನದಲ್ಲಿ 16 ದನಗಳನ್ನು ಸಾಗಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಇನ್ನು ಒಟ್ಟು 16 ದನಗಳ ಪೈಕಿ 2 ದನಗಳು ಸಾವನ್ನಪ್ಪಿ ನಾಲ್ಕು ದನಗಳಿಗೆ ಗಾಯಗೊಂಡಿದೆ ಎಂದು ತಿಳಿದು ಬಂದಿದೆ.

ಈ ಘಟನೆ ಬೆಳಕಿಗೆ ಬಂದಾಕ್ಷಣ ಜಾನುವಾರು ಸಾಗಾಟದ ಖತರ್ನಾಕ್ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕಾರ್ಕಳ: 1 ವರ್ಷದಲ್ಲಿ 16 ದನ ಕಳೆದುಕೊಂಡ ಯಶೋಧ  ಆಚಾರ್ಯಗೆ  ಕಾಂಗ್ರೆಸ್‌-ಬಿಜೆಪಿ ಹಾಗೂ ಬಜರಂಗದಳದಿಂದ ಗೋದಾನ – Vishwanews24

Leave a Reply