ಉಡುಪಿ: ಗೋರಕ್ಷಕ ಸಮಿತಿ ರಚಿಸಲು ವಿ.ಎಚ್.ಪಿ ಮತ್ತು ಬಜರಂಗ ದಳ ಆಗ್ರಹ

Featured, ಉಡುಪಿ

ಉಡುಪಿ: 7 ಸದಸ್ಯರೊಳಗೊಂಡ ಗೋರಕ್ಷಕ ಸಮಿತಿ ರಚಿಸುವಂತೆ ಸರಕಾರವನ್ನು ವಿ.ಎಚ್.ಪಿ ಮತ್ತು ಬಜರಂಗದಳ ಇಂದು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದೆ.

ವಿಶ್ವ ಹಿಂದು ಪರಿಷತ್ ನಾಯಕ ವಿಲಾಸ್ ನಾಯಕ್ ಮಾತನಾಡಿ, “ಜಿಲ್ಲಾಡಳಿತವು ದನಗಳ ಹತ್ಯೆಯನ್ನು ತಡೆದು, ರಕ್ಷಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಕ್ರೀದ್ ಹತ್ತಿರ ಬರುತ್ತಿರುವುದರಿಂದ ಜನರು ದನಗಳನ್ನು ಮಾರಲು ಯತ್ನಿಸುತ್ತಾರೆ ಇದನ್ನು ತಡೆಯಲು ಸೂಕ್ತ ಕ್ರಮ ವಹಿಸಬೇಕೆಂದು” ಹೇಳಿದ್ದಾರೆ.

ಆಗಸ್ಟ್ 24, 2016 ರಂದು ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿ 7 ಸದಸ್ಯರೊಳಗೊಂಡ ಸಮಿತಿ ರಚಿಸಿ ಹಬ್ಬಗಳ ಸಂದರ್ಭ ನಡೆಯುವ ಸಾಮೂಹಿಕ ಪ್ರಾಣಿ ವಧೆಯನ್ನು ತಡೆಯುವ ಬಗ್ಗೆ ಸೂಚಿಸಿದೆ. ಆದರೆ ಈ ಆದೇಶವನ್ನು ಪಾಲಿಸಲಾಗುತ್ತಿಲ್ಲವೆಂದು ದೂರಿದ್ದಾರೆ.

ಜಿಲ್ಲಾ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ಗಳನ್ನು ಹಾಕಿ ಕಾನೂನು ಬಾಹಿರವಾಗಿ ದನ ಸಾಗಾಟ ಮಾಡುವುದನ್ನು ತಡೆಯಬೇಕು. ಅದರೊಂದಿಗೆ ಮುಸ್ಲಿಮರು ದನದ ಹತ್ಯೆ ನಡೆಸದೆ ಶಾಂತಿಯುತವಾಗಿ ಹಿಂಸೆ ರಹಿತ ಬಕ್ರೀದ್ ಆಚರಿಸಬೇಕು ಎಂದು ವಿಲಾಸ್ ನಾಯಕ್ ಕರೆ ನೀಡಿದ್ದಾರೆ.