ಉಡುಪಿ: ಗೋವಿಗಾಗಿ ಮೇವು; ನೀಲಾವರ ಗೋ ಶಾಲೆಗೆ ಹಸಿರು ಹುಲ್ಲಿನ ನೆರವು -Vishwanews24
ನೀಲಾವರ: ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ವಿಶೇಷ ಮುತುವರ್ಜಿಯಲ್ಲಿ ನಡೆಯುತ್ತಿರುವ ನೀಲಾವರ ಗೋ ಶಾಲೆಯಲ್ಲಿ ಸುಮಾರು ಸಾವಿರಕ್ಕೂ ಮಿಕ್ಕಿ ಜಾನುವಾರುಗಳಿವೆ. ಕೊರೊನಾ ಸಂದರ್ಭದಲ್ಲಿ ಗೋ ಶಾಲೆ ನಡೆಸುವುದು ಕಷ್ಟದ ಕೆಲಸ. ಮುಖ್ಯವಾಗಿ ಹಸಿರು ಹುಲ್ಲು ಕೊರತೆ ಮನಗಂಡ ಯುವ ನಾಯಕ ಪೃಥ್ವಿರಾಜ್ ಶೆಟ್ಟಿಯವರು ಗೋವಿಗಾಗಿ ಮೇವು ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ.
ಇದರ ಫಲವಾಗಿ ಇದೀಗ ಉತ್ತಮ ರೀತಿಯಲ್ಲಿ ಸಂಘ, ಸಂಸ್ಥೆಯವರು ಹಸಿರು ಹುಲ್ಲನ್ನು ನೀಡುತ್ತಿದ್ದಾರೆ. ಇಂದು ಮಂದಾರ್ತಿ ಗೋ ಸೇವಾ ಬಳಗವು ಗೋವುಗಳಿಗೆ ಹುಲ್ಲನ್ನು ಪೂರೈಸಿತು. ಈ ಅಭಿಯಾನ ಬೆಂಬಲಿಸಿ ಮೂಕ ಪ್ರಾಣಿಗಳಿಗೆ ಮೇವು ನೀಡಬಹುದು ಎಂದು
ಮಂದಾರ್ತಿ ಗೋ ಸೇವಾ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.
