ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ – ದ. ಕ. ಕ್ಷೇತ್ರಕ್ಕೆ ಪದ್ಮರಾಜ್ : ಕೈ ಅಭ್ಯರ್ಥಿಗಳು ಫೈನಲ್ ; ಘೋಷಣೆಯಷ್ಟೇ ಬಾಕಿ – Vishwanews24
ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ – ದ. ಕ. ಕ್ಷೇತ್ರಕ್ಕೆ ಪದ್ಮರಾಜ್ : ಕೈ ಅಭ್ಯರ್ಥಿಗಳು ಫೈನಲ್ ; ಘೋಷಣೆಯಷ್ಟೇ ಬಾಕಿ
ರಾಜ್ಯದ 16 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಬುಧವಾರ ಅಧಿಕೃತವಾಗಿ ಘೋಷಣೆ ಆಗುವ ನಿರೀಕ್ಷೆ ಇದೆ. ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ 11 ರಾಜ್ಯಗಳ 80 ಲೋಕಸಭಾ ಕ್ಷೇತ್ರಗಳ ಟಿಕೆಟ್ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದು ಅಂತಿಮವಾಗಿ 16 ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಐದು ಕ್ಷೇತ್ರಗಳನ್ನು ಪೆಂಡಿಂಗ್ ಇಡಲಾಗಿದೆ. ಏಳು ಕ್ಷೇತ್ರಗಳಿಗೆ ಈಗಾಗಲೇ ಟಿಕೇಟ್ ಘೋಷಣೆ ಆಗಿದ್ದು ಘೋಷಣೆ ಅಷ್ಟೆ ಬಾಕಿ ಉಳಿದಿದೆ.
ಜಯಪ್ರಕಾಶ್ ಹೆಗ್ಡೆದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಪದ್ಮರಾಜ್ ಹಾಗೂ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ . ಕಾಂಗ್ರೆಸ್ ಸೇರಿ ಚುನಾವಣೆ ಸ್ಪರ್ಧೆ ಮಾಡುತ್ತಾರೆ ಎಂದು ಲೆಕ್ಕಚಾರದಲ್ಲಿದ್ದ ಬಿಜೆಪಿಯ ಡಿ.ವಿ.ಸದಾನಂದ ಗೌಡರ ನಿರೀಕ್ಷೆ ಇದ್ದ ಎಲ್ಲಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಆಗಿದೆ.
ಸಾಲಗಾರರ ಕಾಟ : ಬೆಂಕಿ ಹಚ್ಚಿಕೊಂಡು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ತಾಯಿ – Vishwanews24
