ಉಡುಪಿ: ಜ.22 ರ0ದು ಸಹಕಾರ ರತ್ನ ಇಂದ್ರಾಳಿ ಜಯಕರ ಶೆಟ್ಟಿಯವರಿಗೆ ಅಭಿನಂದನಾ ಸಮಾರಂಭ : vishwanews24
ಉಡುಪಿ: ಜ.22 ರ0ದು ಸಹಕಾರ ರತ್ನ ಇಂದ್ರಾಳಿ ಜಯಕರ ಶೆಟ್ಟಿಯವರಿಗೆ ಅಭಿನಂದನಾ ಸಮಾರಂಭ
ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ
ಉಡುಪಿ: ಶತಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಡುಪಿಯ ಬಡಗಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಕಳೆದ 42 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ – ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಇವರಿಗೆ ಪ್ರಸಕ್ತ ವರ್ಷದಲ್ಲಿ ಸಹಕಾರ ಕ್ಷೇತ್ರದ ಮಹೋನ್ನತ ಗೌರವ ಸಹಕಾರ ರತ್ನ’ ಪ್ರಶಸ್ತಿ ಲಭಿಸಿರುವುದರಿಂದ ದಿನಾಂಕ 22-01-2013ರ ಆದಿತ್ಯವಾರದಂದು ಪೂರ್ವಾಹ್ನ ಗಂಟೆ 9 ರಿಂದ ಉಡುಪಿಯ ಮಿಷನ್ ಕಂಪೌಂಡಿನಲ್ಲಿರುವ ಬಾಸೆಲ್ ಮಿಷನರೀಸ್ ಆಡಿಟೋರಿಯಂನಲ್ಲಿ ಅಭಿನಂದನಾ ಸಮಾರಂಭ ಹಾಗೂ ಸೇವಾ ಚಿಂತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ತಿಳಿಸಿದರು.
ಸಮಾರಂಭದ ವೇದಿಕೆಯಲ್ಲಿ ವಿಶೇಷವಾಗಿ ಜಯಕರ ಶೆಟ್ಟಿಯವರ ಅಭಿನಂದನಾ ಗ್ರಂಥ “ಜಯಪಥವೂ ಬಿಡುಗಡೆಗೊಳ್ಳಲಿರುವುದು. 2022ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ದಕ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷರು ಶ್ರೀ ಯಶ್ಪಾಲ್ ಸುವರ್ಣರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಈ ಸಮಾರಂಭದ ಅಂಗವಾಗಿ ಅದೇ ದಿನ ಪೂರ್ವಾಹ್ನ ಗಂಟೆ 8.30ಕ್ಕೆ ಸರಿಯಾಗಿ ಉಡುಪಿಯ ಜೋಡುಕಟ್ಟೆಯಿಂದ ಮಿಷನ್ ಆಸ್ಪತ್ರೆಯ ಮಾರ್ಗವಾಗಿ ಬಾಸೆಲ್ ಮಿಷನರೀಸ್ ಆಡಿಟೋರಿಯಂವರೆಗೆ ಸಂಘದ ಸಿಬ್ಬಂದಿಗಳು ಹಾಗೂ ಅತಿಥಿ ಅಭ್ಯಾಗತರೊಂದಿಗೆ ಭವ್ಯ ಮೆರವಣಿಗೆ ಹಮ್ಮಿಕೊಂಡಿದ್ದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ ದೇವೇಗೌಡರವರು ಮೆರವಣಿಗೆಯನ್ನು ಉದ್ಘಾಟಿಸಲಿರುವರು.
ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಉಡುಪಿಯ ಬಾಸೆಲ್ ಮಿಷನರೀಸ್ ಆಡಿಟೋರಿಯಂನಲ್ಲಿ ಉಡುಪಿ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರವರು ಉದ್ಘಾಟಿಸಲಿರುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯ ಆಧ್ಯಕ್ಷರಾದ ಡಾ.ಎಂ. ಮೋಹನ ಆಳ್ವ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ರಘುಪತಿ ಭಟ್, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಕೆ.ಎಂ.ಸಿ. ಮಾಹೆಯ ಡೀನ್ ಆದ. ಡಾ. ಪದರಾಜ್ ಹೆಗ್ಡೆ, ಹಿರಿಯ ಸಹಕಾರಿ ಶ್ರೀ ಟಿ. ಶಂಭು ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಲಕ್ಷ್ಮೀನಾರಾಯಣ ಜಿ.ಎನ್, ಲೆಕ್ಕ ಪರಿಶೋಧನಾ ಉಪನಿರ್ದೆಶಕರಾದ ಶ್ರೀ ಗಣೇಶ್ ಮಯ್ಯ, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಉಪಸ್ಥಿತರಿರುವರು. ಸೊಸೈಟಿಯ ಅಧ್ಯಕ್ಷರಾದ ಶ್ರೀ – ಸಂಜೀವ ಕಾಂಚನ ಸಮಾರಂಭದ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷರಾದ ಶ್ರೀ ಎಲ್, ಉಮಾನಾಥ್, ಅಭಿನಂದನಾ ಸಮಿತಿ ಸಂಚಾಲಕರಾದ ಶ್ರೀ ಪುರುಷೋತ್ತಮ ಪಿ. ಶೆಟ್ಟಿ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ. ಸೇರಿಗಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಡುಪಿ : ಆಧಾರ್ ಕಾರ್ಡ್ ನವೀಕರಣಗೊಳಿಸಲು ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ – Vishwanews24
ಉಡುಪಿ ರಜತಮಹೋತ್ಸವ : ಮಲ್ಪೆ ಕಡಲ ಕಿನಾರೆಯಲ್ಲಿ ಸಮಾರಂಭ – Vishwanews24
