ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ
ಉಡುಪಿ: ಜಿಲ್ಲೆಯ ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಶಿವಕುಮಾರ್ ಹಿರಳೆ ಸಾಗರ ಇವರಿಗೆ 2026ನೇ ಸಾಲಿನ ಡಿಜಿ ಮೆಡಲ್ ದೊರೆತಿದೆ. ಇವರು ಸಣ್ಣ ಸಮಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಇವರು ಉಡುಪಿ ಜಿಲ್ಲೆಯಲ್ಲಿ ಎಷ್ಟೋ ಮುಗ್ಧ ಜನರ ಮೊಬೈಲ್ ಪರ್ಸ್, ಬ್ಯಾಗ್, ಚಿನ್ನಾಭರಣ ಕಳೆದುಕೊಂಡವರಿಗೆ ನ್ಯಾಯ ದೊರಕಿಸಿಕೊಟ್ಟ ಪೋಲಿಸ್ ಆಗಿದ್ದು, ಮುಖ್ಯವಾಗಿ ಎಸ್ ಪಿ ಹರಿರಾಮ್ ಶಂಕರ್ ಅವರ women missing task force ತಂಡದಲ್ಲಿ ಕರ್ತವ್ಯ ನಿರ್ವಹಿಸಿ ಸುಮಾರು ವರ್ಷದಿಂದ ಪತ್ತೆಯಾಗದ ಮಹಿಳೆಯರನ್ನು ಪತ್ತೆ ಹಚ್ಚಿರುತ್ತಾರೆ. 30ಕ್ಕಿಂತ ಅಧಿಕ ಕಳ್ಳತನ ಪ್ರಕರಣ ಹಾಗೂ ಕೊಲೆ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಲು ಯಶಸ್ವಿ ಪಾತ್ರ ವಹಿಸಿ ಪ್ರಶಂಸೆ ಗಳಿಸಿದ್ದಾರೆ.
