ಉಡುಪಿ : ಜಿಲ್ಲೆಯಲ್ಲಿ ಇಂದು 169 ಕೊರೋನಾ ಪ್ರಕರಣ -Vishwanews24

Featured, ಉಡುಪಿ

ಉಡುಪಿ : ಜಿಲ್ಲೆಯಲ್ಲಿ ಇಂದು 169 ಕೊರೋನಾ ಪ್ರಕರಣ -Vishwanews24

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 169 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 13912 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 95, ಕುಂದಾಪುರದ 47, ಕಾರ್ಕಳದ 22 ಹಾಗೂ ಇತರೆ ಜಿಲ್ಲೆಗಳ 5 ರೋಗಿಗಳು ಇದ್ದಾರೆ. 76 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 93 ಮಂದಿಗೆ ಲಕ್ಷಣಗಳು ಇಲ್ಲ.

ಶನಿವಾರ 915 ವರದಿಗಳು ನೆಗೆಟಿವ್ ಬಂದಿದ್ದು, 169 ಪಾಸಿಟಿವ್ ಬಂದಿವೆ. 451 ವರದಿಗಳು ಬರುವುದು ಬಾಕಿ ಇದೆ.

ಶನಿವಾರ ಒಟ್ಟು 238 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 12022 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1760 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಶನಿವಾರ 2 ಮಂದಿ ಕೊರೊನಾದಿಂದ ಸಾವನಪ್ಪಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 130 ಮಂದಿ ಸಾವನಪ್ಪಿದ್ದಾರೆ.