ಉಡುಪಿ : ಜಿಲ್ಲೆಯಲ್ಲಿ ಇಂದು 247 ಕೊರೋನಾ ಪ್ರಕರಣ -Vishwanews24

Featured, ಉಡುಪಿ

ಉಡುಪಿ : ಜಿಲ್ಲೆಯಲ್ಲಿ ಇಂದು 247 ಕೊರೋನಾ ಪ್ರಕರಣ -Vishwanews24

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 247 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 13087 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 115, ಕುಂದಾಪುರದ 83, ಕಾರ್ಕಳದ 45 ಹಾಗೂ ಇತರೆ ಜಿಲ್ಲೆಗಳ 4 ರೋಗಿಗಳು ಇದ್ದಾರೆ. 130 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 117 ಮಂದಿಗೆ ಲಕ್ಷಣಗಳು ಇಲ್ಲ.

ಮಂಗಳವಾರ 1057 ವರದಿಗಳು ನೆಗೆಟಿವ್ ಬಂದಿದ್ದು, 247 ಪಾಸಿಟಿವ್ ಬಂದಿವೆ. 311 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಮಂಗಳವಾರ 178 ಮಂದಿ ಗುಣಮುಖರಾಗಿದ್ದು ಇದುವರೆಗೂ 11124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1844 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಮಂಗಳವಾರ 7 ಮಂದಿ ಕೊರೊನಾದಿಂದ ಸಾವನಪ್ಪಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 121 ಮಂದಿ ಸಾವನಪ್ಪಿದ್ದಾರೆ.