ಉಡುಪಿ : ಜು.23 ರ ಕೋವಿಡ್ ಲಸಿಕೆ ಲಭ್ಯತೆಯ ಮಾಹಿತಿ -Vishwanews24

Featured, ಉಡುಪಿ

 ಉಡುಪಿ : ಜು.23 ರ ಕೋವಿಡ್ ಲಸಿಕೆ ಲಭ್ಯತೆಯ ಮಾಹಿತಿ -Vishwanews24

ಜು.23 ರಂದು ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳು/ಆದ್ಯತಾ ಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯ.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ, ಅಜ್ಜರಕಾಡು ಉಡುಪಿ (ಜಿಲ್ಲಾ ಆಸ್ಪತ್ರೆಯ ಹಿಂಭಾಗ) 2ನೇ ಡೋಸ್ ಕೋವಿಶೀಲ್ಡ್ ಲಸಿಕೆ- (100 ಡೋಸ್ ಲಭ್ಯ)

ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ (ಬೆಳಿಗ್ಗೆ10 ರಿಂದ ಅಪರಾಹ್ನ1 ರ ವರೆಗೆ) ದಿನಾಂಕ 28/07/2021 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ (100 ಡೋಸ್ ಲಭ್ಯ.)

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳು/ಆದ್ಯತಾ ಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕೆ ಲಭ್ಯವಿದ್ದಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.