ಉಡುಪಿ : ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ  – ಐವರು ಪ್ರಯಾಣಿಕರಿಗೆ ಒಂದು ತಿಂಗಳ ಜೈಲು ಶಿಕ್ಷೆ – Vishwanews24

Featured, ಉಡುಪಿ

ಉಡುಪಿ : ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ  – ಐವರು ಪ್ರಯಾಣಿಕರಿಗೆ ಒಂದು ತಿಂಗಳ ಜೈಲು ಶಿಕ್ಷೆ

ಉಡುಪಿ : ಟಿಕೆಟ್ ಇಲ್ಲದೇ ರೈಲು ಹತ್ತಿದ ಕೆಲ ಪ್ರಯಾಣಿಕರು ಜೈಲು ಪಾಲಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಜುನೈದ್ (24), ಸುಜಿತ್ (23), ವಿಷ್ಣು (25), ಯುನಿಸ್ (24) ಮತ್ತು ಮಿಸಾಬ್ (24) ಅವರು ಟಿಕೆಟ್ ಇಲ್ಲದೆ ಕೇರಳದಿಂದ 12620 ನಂಬರ್ ಹೊಂದಿರುವ ಗೋವಾಗೆ ಹೋಗುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ಗೆ ಹತ್ತಿದ್ದು, ರೈಲು ಉಡುಪಿ ತಲುಪಿದಾಗ ಟಿಕೆಟ್ ಪರೀಕ್ಷಕರು ಟಿಕೆಟ್ ಕೇಳಿದಾಗ ಈ ಪ್ರಯಾಣಿಕರು ಅಸಡ್ಡೆ ಉತ್ತರ ನೀಡಿದ್ದಾರೆ.

ಮಂಡ್ಯ: ಬಾಲಕಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್..ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸಾಬೀತು.. ಟ್ಯೂಶನ್ ಮೇಲ್ವಿಚಾರಕ ಕಾಂತರಾಜು ಗಲ್ಲಿಗೆ ಆಗ್ರಹ – Vishwanews24

ರೈಲ್ವೇ ರಕ್ಷಣಾ ಪಡೆ ಸಬ್ ಇನ್ಸ್‌ಪೆಕ್ಟರ್ ಸುಧೀರ್ ಶೆಟ್ಟಿ ಹಾಗೂ ಸಿಬ್ಬಂದಿ ಜೀನ ಪಿಂಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ತಲಾ ಒಂದು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 1000 ರೂ. ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ ಜೈಲು ಶಿಕ್ಷೆಯನ್ನು ಎರಡು ತಿಂಗಳು ವಿಸ್ತರಿಸಲಾಗುವುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

Leave a Reply