ಉಡುಪಿ : ದಿನಬಳಕೆ ವಸ್ತುಗಳ ದರ ಗಗನಕ್ಕೇರಿದ್ದು, ಆರ್ಥಿಕ ವ್ಯವಸ್ಥೆಯೇ ನಾಶವಾಗಿದೆ : ವಿನಯ ಕುಮಾರ್‌ ಸೊರಕೆ -Vishwanews24

Featured, ಉಡುಪಿ

ಉಡುಪಿ : ದಿನಬಳಕೆ ವಸ್ತುಗಳ ದರ ಗಗನಕ್ಕೇರಿದ್ದು, ಆರ್ಥಿಕ ವ್ಯವಸ್ಥೆಯೇ ನಾಶವಾಗಿದೆ : ವಿನಯ ಕುಮಾರ್‌ ಸೊರಕೆ -Vishwanews24

ಉಡುಪಿ: ಬಂಡವಾಳಶಾಹಿಗಳು, ಶ್ರೀಮಂತರ ಪ್ರಗತಿ ಬಯಸುತ್ತಿರುವ ಕೇಂದ್ರ ಸರಕಾರ ರೈತರು, ಕಾರ್ಮಿಕರ ಸಹಿತ ಬಡ ವರ್ಗದ ಜನರ ಏಳಿಗೆ, ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ.

ಕೋಟ್ಪಾ ಕಾಯಿದೆ ತಿದ್ದುಪಡಿಯಿಂದ ಬೀಡಿ ಉದ್ಯಮವನ್ನು ಹೊರಗಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬೀಡಿ ಉದ್ಯಮ ಕೆಲಸಗಾರರ ಒಕ್ಕೂಟ, ಕರ್ನಾಟಕ ರಾಜ್ಯ ಬೀಡಿ ಗುತ್ತಿಗೆದಾರರ ಸಂಘ, ಕರ್ನಾಟಕ ರಾಜ್ಯ ಋುಣಮುಕ್ತ ಹೋರಾಟ ಉಡುಪಿ ಜಿಲ್ಲಾಸಮಿತಿ, ಕಾರ್ಕಳ ಪ್ರದೇಶ ಬೀಡಿ ಕೆಲಸಗಾರರ ಸಂಘದ ವತಿಯಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಉಡುಪಿಯ MGM ಕಾಲೇಜಿನಲ್ಲಿ ಇಂದಿನಿಂದ ಎರಡು ದಿನಗಳ ಪುಸ್ತಕೋತ್ಸವ -Vishwanews24

ದಿನಬಳಕೆ ವಸ್ತುಗಳ ದರ ಗಗನಕ್ಕೇರಿದ್ದು, ಆರ್ಥಿಕ ವ್ಯವಸ್ಥೆಯೇ ನಾಶವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ ಬಿಜೆಪಿ ಆಡಳಿತದ ಆರು ವರ್ಷಗಳಲ್ಲಿ ಕೇವಲ 1 ಲಕ್ಷ ಉದ್ಯೋಗ ನೀಡಲಾಗಿದೆ. ಕೊರೊನಾ ಬಳಿಕ ಇದ್ದ ಉದ್ಯೋಗವೂ ಕಳೆದುಹೋಗಿದೆ. ಬೀಡಿ ಕಾರ್ಮಿಕರ ಸಮಸ್ಯೆಯನ್ನು ವಿಧಾನಸಭೆ, ಸಂಸತ್‌ನಲ್ಲೂ ಪ್ರಸ್ತಾಪಿಸಲಾಗುವುದು ಎಂದರು.

ಕಾಂಗ್ರೇಸ್ ಎಷ್ಟು ಬಾರಿ ಆರ್‌ಎಸ್‌ಎಸ್‌ನ ಬಗ್ಗೆ ಟೀಕೆ ಮಾಡುತ್ತಾರೋ, ಆರ್‌ಎಸ್‌ಎಸ್‌ ಅಷ್ಟೇ ಬಲಿಷ್ಠವಾಗಲಿದೆ : ಸಿಎಂ. BSY -Vishwanews24

ಎಐಟಿಯುಸಿ ಉಪಾಧ್ಯಕ್ಷ ಬಿ. ಶೇಖರ್‌, ದಕ ಜಿಲ್ಲಾಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಪೂಜಾರಿ, ಕರ್ನಾಟಕ ರಾಜ್ಯ ಋುಣಮುಕ್ತ ಹೋರಾಟ ಉಡುಪಿ ಜಿಲ್ಲಾಸಮಿತಿ ಅಧ್ಯಕ್ಷ ಮಂಜುನಾಥ ಬೈಲೂರು, ಕಾರ್ಕಳ ಪ್ರದೇಶ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಹಮೀದ್‌, ಕೃಷ್ಣಪ್ಪ ತೊಕ್ಕೊಟ್ಟು ಉಪಸ್ಥಿತರಿದ್ದರು.

ಮಂಗಳೂರು: ಉಜಿರೆ ಎಸ್ ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೇಯಾ ರೈ ದುಬೈನಲ್ಲಿ ಕೋವಿಡ್ ಗೆ ಬಲಿ -Vishwanews24