ಉಡುಪಿ : ದ್ವಿತೀಯ ಪಿ.ಯು.ಸಿ ಪರೀಕ್ಷೆ -2 : ನೋಂದಣಿಗೆ ಅವಕಾಶ – vishwanews24

Featured, ಉಡುಪಿ

ಉಡುಪಿ : ದ್ವಿತೀಯಪಿ.ಯು.ಸಿಪರೀಕ್ಷೆ -2 : ಏ. 17 ರ ವರೆಗೆ ನೋಂದಣಿಗೆಅವಕಾಶ

  ಉಡುಪಿ : 2026 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ಕ್ಕೆ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಏಪ್ರಿಲ್ 17 ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 2026 ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊAಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೇ ಆನ್ಲೈನ್  http://tinyurl.com/mvp9k6es  ಲಿಂಕ್ ಮೂಲಕ ಅಥವಾ ಅಭ್ಯರ್ಥಿಗಳು ಸಂಬ0ಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ PU EXAM PORTAL ನಲ್ಲಿ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ

ಸಂಬ0ಧಿಸಿದ ಕಾಲೇಜಿನ ಪ್ರಾಂಶುಪಾಲರುಗಳಿಗೆ 2026 ರಲ್ಲಿ ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ಹಾಗೂ ಕಾರಣಾಂತರಗಳಿ0 ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳನ್ನು ತಮ್ಮ ಪಿ.ಯು ಎಕ್ಸಾಮ್ ಪೋರ್ಟಲ್ ಲಾಗಿನ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದಾಗಿದೆ

ಇದನ್ನೂ ಓದಿ:

ಉಡುಪಿ: ಯುವತಿ ನಾಪತ್ತೆ – vishwanews24

2026 ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊAಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆ-2 ಕ್ಕೆ ನೋಂದಾಯಿಸುವ0ತೆ ಮಾಡಬೇಕು.

  ಪರೀಕ್ಷೆಗೆ ನೋಂದಾಯಿಸಿಕೊ0 ವಿದ್ಯಾರ್ಥಿಗಳಿಗೆ ಪ್ರವೇಶಪತ್ರಗಳನ್ನು ನಿಗಧಿತ ಸಮಯದಲ್ಲಿ ಸಂಬ0ಧಿಸಿದ ಕಾಲೇಜಿನ ಪ್ರಾಂಶುಪಾಲರುಗಳ ಲಾಗಿನ್ ನಲ್ಲಿ ಲಭ್ಯವಿರಲಿದೆ. ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ದಿನಾಂಕಗಳನ್ನು ಮರುನಿಗಧಿಪಡಿಸಲಾಗಿದ್ದು, ಪರೀಕ್ಷೆಗಳು ಏಪ್ರಿಲ್ 30 ರಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಮಂಡಲಿಯ ಜಾಲತಾಣದ ಪಿಯುಸಿ ವಿದ್ಯಾರ್ಥಿ ಅಂಕಣದಲ್ಲಿ ಲಭ್ಯಗೊಳಿಸಲಾದ ಮಾದರಿ ಪ್ರಶ್ನೆ ಪತ್ರಿಕೆಗಳ ಅನ್ವಯ ಪರೀಕ್ಷೆ-2 ಕ್ಕೆ ಯಾವುದೇ ಆತಂಕಗಳಿಲ್ಲದೆ, ಶಾಂತ ಚಿತ್ತತೆಯಿಂದ ಸಿದ್ಧತೆಯನ್ನು ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ

ಇದನ್ನೂ ಓದಿ:

ಉಡುಪಿ  : ಶಾಖದ ಹೊಡೆತದಿಂದ ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ- ಸೂಚನೆಗಳು – vishwanews24

Leave a Reply