ಉಡುಪಿ : ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದು ಷಡ್ಯಂತ್ರ : ಸಿ.ಟಿ.ರವಿ – Vishwanews24
ಉಡುಪಿ : ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದು ಷಡ್ಯಂತ್ರ : ಸಿ.ಟಿ.ರವಿ – Vishwanews24
ಉಡುಪಿ: ಕೆಲವು ಪಕ್ಷಗಳಿಗೆ ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಬದಲಾಗಿ ಇಟೆಲಿ ಚೀನಾದಿಂದ ಬಂದರೆ ಮಾತ್ರ ಹೆಚ್ಚು ನಂಬಿಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಅವರು ಮಂಗಳವಾರ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಲಸಿಕೆ ಬಗ್ಗೆ ಕೆಲವೊಂದು ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ದುರ್ದೈವವಾಗಿದ್ದು ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದು ಷಡ್ಯಂತ್ರವಾಗಿದೆ. ಕೆಲವೊಂದು ಪಕ್ಷದವರು ತಾವು ಮಾಡೋದಿಲ್ಲ ಮಾಡುವವರಿಗೆ ಬಿಡುವುದಿಲ್ಲ ಅವರು ಅಂತಹ ಮನಸ್ಥಿತಿ ಬದಲಾಯಿಸಿಕೊಳ್ಳಬೇಕಾಗಿದೆ. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದರು
ಅವರಿಗೆ ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಒಳ್ಳೆದು ಅಂತಾರೆ ಆದರೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕೆಲವೊಂದು ಪಕ್ಷಗಳಿಗೆ ಈ ದೇಶದ ಜನರ ಓಟು ಬೇಕು ಆದರೆ ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಅಲ್ಲದೆ ಅವರಿಗೆ ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
