ಉಡುಪಿ : ನೀಲಾವರ ಗೋಶಾಲೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಗೋವಿಗಾಗಿ ಮೇವು ಅಭಿಯಾನ -Vishwanews24

Featured, ಉಡುಪಿ

ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಮಹಿಳಾಮೋರ್ಚಾ ವತಿಯಿಂದ ಜಿಲ್ಲಾ ಅದ್ಯಕ್ಷರಾದ ವೀಣಾ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಗುರುವಾರ ಗೋವಿಗಾಗಿ ಮೇವು ಅಭಿಯಾನದಡಿ ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ನೀಲಾವರ ಗೋಶಾಲೆಗೆ 2 ಲೋಡ್ ಹಸಿಹುಲ್ಲನ್ನು ಕಟಾವುಮಾಡಿ ಪೇಜಾವರ ವಿಶ್ವಪ್ರಸನ್ನ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು.

ಮಹಿಳಾಮೋರ್ಚಾ ಜಿಲ್ಲಾ ಅದ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ ಉಡುಪಿ ಜಿಲ್ಲೆಯ 6 ಮಂಡಲದ ಮಹಿಳಾಮೋರ್ಚಾ ಗಳಿಗೆ ಅಭಿಯಾನದಲ್ಲಿ ಕೈಜೋಡಿಸಲು ಸೂಚಿಸಲಾಗಿದೆ ಹಾಗೂ ಜಿಲ್ಲೆಯ ಎಲ್ಲಾ ಸ್ತ್ರೀ ಶಕ್ತಿ,ಸ್ವಸಹಾಯ ಸಂಘಗಳು ಅಬಿಯಾನದಲ್ಲಿ ಪಾಲ್ಗೋಳ್ಳುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಪೇಜಾವರ ಶ್ರೀಪಾದರ ಆಶೀರ್ವಾದೊಂದಿಗೆ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು ,ಮುಂದಿನ ದಿನಗಳಲ್ಲಿ ಬಿಜೆಪಿಯ ಎಲ್ಲಾ ಮೋರ್ಚಾ ಗಳಿಗೆ ಪ್ರತೀ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಮೇವನ್ನು ನೀಡಲು ಸೂಚಿಸಲಾಗಿದೆ ಹಾಗೂ ರಾಜ್ಯ ಬಿಜೆಪಿ ಅದ್ಯಕ್ಷರ ಗಮನಕ್ಕೆ ಅಭಿಯಾನದ ಕುರಿತು ಗಮನ ತರಲಾಗಿದೆ ಎಂದರು ಕೆಲ ದಿನಗಳ ಹಿಂದೆ ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ ಹಾಗೂ ಕೆಲ ಯುವಕರಿಂದ ಆರಂಭಗೊಂಡ ಅಭಿಯಾನ ರಾಜ್ಯ ವ್ತಾಪಿ ಹರಡಲಿ ಎಂದರು.