ಉಡುಪಿ ನೇಜಾರು ಕೊಲೆ ಪ್ರಕರಣ: ಆರೋಪಿಯ ಅರ್ಜಿಗೆ ಆಕ್ಷೇಪಣೆ: ಜ. 31ಕ್ಕೆ ವಾದ ಮಂಡನೆ – vishwanews24
ನೇಜಾರು ಕೊಲೆ ಪ್ರಕರಣ: ಆರೋಪಿಯ ಅರ್ಜಿಗೆ ಆಕ್ಷೇಪಣೆ: ಜ. 31ಕ್ಕೆ ವಾದ ಮಂಡನೆ
ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ ಅರ್ಜಿಗೆ ವಿಶೇಷ ಅಭಿಯೋಜಕರ ಆಕ್ಷೇಪ ಸಲ್ಲಿಸಿದ್ದು, ಈ ಕುರಿತು ಜ.31ಕ್ಕೆ ವಾದ ಪ್ರತಿವಾದ ವನ್ನು ಮಂಡಿಸಲು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ಮುಂದೂಡಿ ಶನಿವಾರ ಆದೇಶಿಸಿದೆ.
ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೇ ವೇಳೆ ಸಂತ್ರಸ್ತ ಕುಟುಂಬದ ಯಜಮಾನ ನೂರ್ ಮುಹಮ್ಮದ್ ಹಾಜರಿದ್ದರು. ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಆರೋಪಿಯ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಆಕ್ಷೇಪಣೆ ಸಲ್ಲಿಸಿದ್ದರು.
ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ವಂಚಕರ ಜಾಲ : ನಕಲಿ ಯುಪಿಐ ಐಡಿಗಳ ಮೂಲಕ ಭಕ್ತರಿಗೆ ವಂಚನೆ – vishwanews24
ಈ ಬಗ್ಗೆ ವಾದ ಮಂಡಿಸಲು ಫೆ.10ರವರೆಗೆ ಕಾಲಾವಕಾಶ ಬೇಕೆಂಬುದಾಗಿ ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಿನಾಕಾರಣ ವಿಚಾರಣೆಯನ್ನು ಮುಂದೂಡಿ ವಿಳಂಬ ಮಾಡಲಾಗುತ್ತಿದೆ ಎಂದು ವಿಶೇಷ ಅಭಿಯೋ ಜಕರು ಹೇಳಿದರು. ಇದಕ್ಕಾಗಿ ಸಂತ್ರಸ್ತ ಕುಟುಂಬದ ಯಜಮಾನ ಕೂಡ ವಿದೇಶದಿಂದ ಬಂದಿದ್ದು, ಅವರು ಶೀಘ್ರ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಆದುದರಿಂದ ವಿಚಾರಣೆಯನ್ನು ವಿಳಂಬ ಮಾಡಬಾರದು ಎಂದು ವಿಶೇಷ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸಮಿವುಲ್ಲಾ, ಆರೋಪಿ ಪರ ವಕೀಲರಿಗೆ ವಾದ ಮಂಡಿಸಲು ಜ.31ಕ್ಕೆ ದಿನಾಂಕ ನಿಗದಿಪಡಿಸಿ ಆದೇಶಿಸಿದರು. ಆರೋಪಿ ಪರ ವಕೀಲರ ವಾದದ ಬಳಿ ವಿಶೇಷ ಸರಕಾರಿ ಅಭಿಯೋಜಕರು ಪ್ರತಿವಾದ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ರಘುಪತಿ ಭಟ್ ಆಯ್ಕೆ – vishwanews24
