ಉಡುಪಿ ನೇಜಾರು ಹತ್ಯಾಕಾಂಡ : ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ.. Vishwanews24

Featured, ಉಡುಪಿ

ಉಡುಪಿ ನೇಜಾರು ಹತ್ಯಾಕಾಂಡ : ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ..

ಉಡುಪಿ : ಉಡುಪಿ ನೇಜಾರು ಹತ್ಯಾಕಾಂಡದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ಅವರು, ಮಲ್ಪೆಯ ನಾಲ್ಕು ಮಂದಿ ಕೊಲೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಪ್ರವೀಣ್ ಚೌಗಲೇ ಎಂಬಾತನನ್ನು ನ.15 ರಂದು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಲಾಗಿದ್ದು, ಎಲ್ಲಾ ಸಾಕ್ಷಿಗಳು ಹಾಗೂ ಎಫ್‍ಎಸ್‍ಎಲ್ ವರದಿಗಳು ಬಂದಿದೆ. ಈ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿ ವಿಶೇಷ ಸರಕಾರಿ ಅಭಿಯೋಜಕರ ಸಲಹೆ ಪಡೆದು ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಆದಷ್ಟು ಬೇಗ ಆರಂಭಿಸಿಲು ಮನವಿ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ ಎಂದಿದ್ದಾರೆ.

ಕಿರುತೆರೆ ನಟ ರವಿಕಿರಣ್ ವಿರುದ್ಧ ಅವ್ಯವಹಾರ ಆರೋಪ: ದೂರು ದಾಖಲು – Vishwanews24

Leave a Reply