ಉಡುಪಿ : ಮಲ್ಪೆ ಪಡುಕೆರೆ ಬೀಚ್ ನಲ್ಲಿ ಮತ್ತೆ ಪ್ರವಾಸಿಗರ ಹುಚ್ಚಾಟ , ಬಂಡೆಗಳ ಮೇಲೆ ನಿಂತು ಸೆಲ್ಫಿ – Vishwanews24
ಉಡುಪಿ : ಪಡುಕೆರೆ ಬೀಚ್ ನಲ್ಲಿ ಮತ್ತೆ ಪ್ರವಾಸಿಗರ ಹುಚ್ಚಾಟ , ಬಂಡೆಗಳ ಮೇಲೆ ನಿಂತು ಸೆಲ್ಫಿ
ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಇರುವ ಪಡುಕೆರೆ ಬೀಚ್ ನಲ್ಲಿ ಇಂದು ಮತ್ತೆ ಪ್ರವಾಸಿಗರ ಹುಚ್ಚಾಟ ಕಂಡು ಬಂದಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬೀಚ್ ಗಳಿಗೂ ಜಿಲ್ಲಾಡಳಿತ ಪ್ರವೇಶ ನಿಷೇಧಿಸಿ ಈ ಹಿಂದೆಯೇ ಆದೇಶ ಹೊರಡಿಸಿದೆ.
ಮಳೆಗಾಲದಲ್ಲಿ ಕಡಲಬ್ಬರ ಜಾಸ್ತಿ ಆಗುವ ಹಿನ್ನಲೆಯಲ್ಲಿ ಜೂ. ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಬೀಚ್ ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈಗಾಗಲೇ ಜಿಲ್ಲೆಯ ಮಲ್ಪೆ ಬೀಚ್ ಗೆ ಪ್ರವಾಸಿಗರ ಸುರಕ್ಷತಾ ದೃಷ್ಟಿ ತಡೆಬೇಲಿಯನ್ನು ಅಳವಡಿಕೆ ಮಾಡಲಾಗಿದೆ.
ಆದ್ರೆ ಪಡುಕೆರೆ ಬೀಚ್ ಗೆ ಯಾವುದೇ ಭದ್ರತೆ ಇಲ್ಲ.ಇಲ್ಲಿ ಒಂದು ಬದಿ ಸಮುದ್ರ, ಇನ್ನೊಂದು ನದಿ ಇದ್ದು ಬಹಳ ಆಕರ್ಷವಾಗಿದೆ.
ಮಂಗಳೂರು : ನಿರಂತರ ಮಳೆ – ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ – Vishwanews24
ಹೀಗಾಗಿ ಬೀಚ್ ಗೆ ಆಗಮಿಸುವ ಪ್ರವಾಸಿಗರು ಸ್ಥಳೀಯರ ಮಾತಿಗೆ ಬೆಲೆ ಕೊಡದೇ ಸಮುದ್ರಕ್ಕೆ ಇಳಿತಾ ಇದ್ದಾರೆ.ಮಾತ್ರವಲ್ಲ ಕಡಲ ಕೊರತಕ್ಕೆ ಹಾಕಿದ ಬಂಡೆಗಳ ಮೇಲೆ ನಿಂತು ಸೆಲ್ಫಿ ಕ್ಲಿಕಿಸಿಕೊಳ್ಳುತಿದ್ದಾರೆ.
ಇನ್ನು ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಪಡುಕರೆ ಬೀಚ್ ಅಪಾಯಕ್ಕೆ ಆಹ್ವಾನ ನೀಡುವ ಬೀಚ್ ಆಗಿದೆ.
ಆದ್ದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಂಡು ಪ್ರವಾಸಿಗರ ಸುರಕ್ಷತೆಯನ್ನು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾಸನ : ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಮರದ ಕೊಂಬೆ ಬಡಿದು ವ್ಯಕ್ತಿ ದಾರುಣ ಸಾವು – Vishwanews24
