ಉಡುಪಿ ಪರ್ಯಾಯ : ಐದು ಸಾವಿರ ಜನರ ಪಾದಯಾತ್ರೆ ರದ್ದು , 285 ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ – Vishwanews24

Featured, ಉಡುಪಿ

ಉಡುಪಿ ಪರ್ಯಾಯ : ಐದು ಸಾವಿರ ಜನರ ಪಾದಯಾತ್ರೆ ರದ್ದು , 285 ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ – Vishwanews24

ಉಡುಪಿ: ಶ್ರೀಕೃಷ್ಣನ ಪೂಜಾಧಿಕಾರ ಅದಮಾರು ಮಠದಿಂದ ಕೃಷ್ಣಾಪುರ ಮಠಕ್ಕೆ ಹಸ್ತಾಂತರ ಆಗಲಿದೆ. ಪರ್ಯಾಯ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಈ ನಡುವೆ ರಾಜ್ಯಕ್ಕೆ ಮಾದರಿಯಾದ ಕೆಲಸವೊಂದನ್ನು ಭಾವೀ ಕೃಷ್ಣಾಪುರ ಮಠ ಮಾಡಿದೆ.

ಐದು ಸಾವಿರ ಜನರ ಪಾದಯಾತ್ರೆ ರದ್ದು ಮಾಡಿ, 285 ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಮಾಡಿದೆ.

ಉಡುಪಿ ನಗರದ ಜೋಡುಕಟ್ಟೆಯಿಂದ ಹೊರೆ ಕಾಣಿಕೆ ಮೆರವಣಿಗೆ ಆರಂಭವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿ ತರಕಾರಿ ದಿನಸಿ ವಸ್ತುಗಳನ್ನು ಮಠಕ್ಕೆ ಕಾಣಿಕೆಯಾಗಿ ಕೊಡುತ್ತಾರೆ. ಈ ಬಾರಿ ಐದು ಸಾವಿರಕ್ಕಿಂತ ಹೆಚ್ಚು ಜನ ಪಾದಯಾತ್ರೆಯ ಮೂಲಕ ಹೊರೆಕಾಣಿಕೆಗಳನ್ನು ಸಲ್ಲಿಕೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವಿಪರೀತವಾಗಿ ಹರಡುತ್ತಿರುವುದರಿಂದ ಕಾರ್ಯಕ್ರಮ ರದ್ದು ಮಾಡಲಾಗಿದೆ. ವಾಹನಗಳ ಮೂಲಕ ಮಾತ್ರ ಹೊರಕಾಣಿಕೆ ಕೃಷ್ಣಮಠಕ್ಕೆ ತಲುಪಿಸಲಾಗಿದೆ.

ಜಗತ್ತಿಗೆ ಕೊರೊನಾ ಸಾಂಕ್ರಾಮಿಕ ಮಹಾಮಾರಿ ಅಪ್ಪಳಿಸಿದೆ. ವರ್ಷದ ಹಿಂದೆಯೇ ನಾವು ಒಂದು ನಿರ್ಧಾರವನ್ನು ಮಾಡಿದ್ದೆವು. ಪರ್ಯಾಯ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ನಿಯಮಗಳು ಹೇಗಿರುತ್ತದೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಪ್ರದಾಯಕ್ಕೆ ಚ್ಯುತಿ ಬರದ ಹಾಗೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಅದರಂತೆ ಕಾರ್ಯಕ್ರಮ ಮಾಡಿಕೊಂಡು ಹೋಗುತ್ತಿದ್ದೇವೆ. ದೇವರು ಅನುಗ್ರಹಿಸಿದಂತೆ ಕಾರ್ಯಕ್ರಮಗಳು ನಡೆಯುತ್ತಿದೆ. ಅದ್ದೂರಿತನಕ್ಕೆ ಒತ್ತುಕೊಡದೆ, ಸಾಂಪ್ರದಾಯಿಕ ಪರ್ಯಾಯ ನಡೆಸುತ್ತೇವೆ ಎಂದು ಕೃಷ್ಣಾಪುರ ಮಠಾಧೀಶ ಭಾವೀ ಪರ್ಯಾಯ ಪೀಠಾಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ

ಮೂಡಬಿದ್ರಿ : ರಸ್ತೆ ಬದಿ ದನದ ತಲೆ ಪತ್ತೆ ಪ್ರಕರಣ: ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಕಾಂಗ್ರೆಸ್‌ನಿಂದ ಕಮೀಷನರ್‌ಗೆ ಮನವಿ – Vishwanews24

Leave a Reply