ಉಡುಪಿ : ಪಿಯುಸಿ ಪರೀಕ್ಷೆ ಹಿಜಾಬ್ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ಇಲ್ಲ : ಯಶ್ಪಾಲ್ ಸುವರ್ಣ -Vishwanews24
ಉಡುಪಿ : ಪಿಯುಸಿ ಪರೀಕ್ಷೆ ಹಿಜಾಬ್ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ಇಲ್ಲ : ಯಶ್ಪಾಲ್ ಸುವರ್ಣ -Vishwanews24
ದ್ವಿತೀಯ ಪಿಯು ಪರೀಕ್ಷೆ ಶುಕ್ರವಾರದಿಂದ ಆರಂಭವಾಗಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು.
ಅವರು ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಹಿಜಬ್ ವಿಚಾರದಲ್ಲಿ ಬಹಳ ಗೊಂದಲ ಅಡೆತಡೆ ಸೃಷ್ಟಿಯಾಗಿದೆ, ಎಲ್ಲರೂ ಸರಕಾರದ ಸುತ್ತೋಲೆ ಸೂಚನೆ ಪಾಲಿಸಬೇಕು, ಹಿಜಾಬ್ ಗಾಗಿ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು ಕೋರ್ಟ್ ಆದೇಶ ಧಿಕ್ಕರಿಸಿದ್ದಾರೆ. ಆದರೆ ಭವಿಷ್ಯದ ಚಿಂತನೆ ಮಾಡಿ, ನಿಯಮ ಉಲ್ಲಂಘನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಮತ್ತೆ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದು ಕರೆ ನೀಡಿದ್ದಾರೆ
ವಿದ್ಯಾರ್ಥಿಗಳಲ್ಲಿ ಯಾವುದೇ ಬೇಧಭಾವ ಇಲ್ಲ, ನಾಳೆ ಬೆಳಗ್ಗೆಯೂ ಹಾಲ್ ಟಿಕೆಟ್ ಪಡೆಯಬಹುದು. ಹಿಜಾಬ್ ಹಾಕಿ ಪರೀಕ್ಷೆಗೆ ಬಂದರೆ ಅವಕಾಶ ಇಲ್ಲ, ಹೈಕೋರ್ಟ್ ಗೆ ನ್ಯಾಯಮೂರ್ತಿಗಳಿಗೆ ಅಗೌರವ ತೋರಿದವರು, ರಾಜ್ಯದಾದ್ಯಂತ ರಾದ್ಧಾಂತ ಮಾಡಿ ಸಿಎಂ ಗೆ ಮನವಿ ಮಾಡೋದು ಎಷ್ಟು ಸರಿ???
ಆರು ಜನ ವಿದ್ಯಾರ್ಥಿಗಳು ಟೆರರಿಸ್ಟ್ ಸಂಘಟನೆ ಜೊತೆ ಗುರುತಿಸಿದವರು, ದೇಶದ್ರೋಹಿ ಮತಾಂಧ ಸಂಘಟನೆ ವಿದ್ಯಾರ್ಥಿಗಳಿಗೆ ಬೆಂಬಲಿಸಿವೆ, ಆರು ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಅರಿತಿಲ್ಲ. ಪರೀಕ್ಷೆ ಬಗ್ಗೆ ಅವರಿಗೆ ಮಹತ್ವ ಅರಿವು ಇರುವ ಸಾಧ್ಯತೆ ಕಡಿಮೆ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಿಂತ ಧರ್ಮ, ಹಿಜಬ್ ಮುಖ್ಯವಾಗಿದೆ ಎಂದರು .
ಪರೀಕ್ಷಾ ಕೇಂದ್ರಗಳಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್, ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
