ಉಡುಪಿ : ಪುಟ್ಟ ಬಾಲಕ ಭವಿತ್‌ ಗೆ ಬೇಕಾಗಿದೆ ಮಾನವೀಯತೆಯ ಸಹಾಯ ಹಸ್ತ.. ಉಡುಪಿ ಪರ್ಯಾಯ ಮಹೋತ್ಸವದಲ್ಲಿ ತಮ್ಮ ಕೈಲಾದ ಸಹಾಯ ನೀಡಿ ಭವಿತ್‌ ಕುಟುಂಬದ ಜೊತೆ ಕೈ ಜೋಡಿಸಿ.. Vishwanews24

Featured, ಉಡುಪಿ

ಪುಟ್ಟ ಬಾಲಕ ಭವಿತ್‌ ಗೆ ಬೇಕಾಗಿದೆ ಮಾನವೀಯತೆಯ ಸಹಾಯ ಹಸ್ತ.. ಉಡುಪಿ ಪರ್ಯಾಯ ಮಹೋತ್ಸವದಲ್ಲಿ ತಮ್ಮ ಕೈಲಾದ ಸಹಾಯ ನೀಡಿ ಭವಿತ್‌ ಕುಟುಂಬದ ಜೊತೆ ಕೈ ಜೋಡಿಸಿ..

ಎಲ್ಲಾ ಮಕ್ಕಳಂತೆ ಕಲಿಕೆಯತ್ತ ಹೆಜ್ಜೆ ಹಾಕುತ್ತಾ, ಅಕ್ಕಪಕ್ಕದ ಸಹಪಾಠಿಗಳೊಂದಿಗೆ ಆಟೋಟಗಳಲ್ಲಿ ಭಾಗವಹಿಸಿ ನಕ್ಕುನಲಿದಾಡ ಬೇಕಾದ ಬರೀ ಒಂಭತ್ತು ವಯಸ್ಸಿನ ಭವಿತ್‌, ಇಂದು ಪರಿಸರದ ಪ್ರಜ್ಞೆಯಿಲ್ಲದ ನಿಸ್ತೇಜನಾಗಿ ಮಲಗಿಕೊಂಡಿದ್ದಾನೆ.

ದೃಷ್ಟಿ ಮತ್ತು ಆಲಿಸುವ ಶಕ್ತಿಯನ್ನು ಕಳೆದುಕೊಂಡು, ಅಡ್ರಿನೊಮೈಲೋನ್ಯೂರೋಪತಿ ಎಂಬ ಅಪರೂಪದ ಮಾರಕ ಖಾಯಿಲೆಯ ಭಯಾನಕ ನೋವನ್ನನುಭವಿಸಿ ಮೌನ ಮತ್ತು ದೀನವಾಗಿ ರೋಧಿಸುವ ಆ ದೃಶ್ಯವಂತೂ ಕರುಣಾಜನಕವಾದುದು.

ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ರಸ್ತೆಯ ಕೆನರಾ ಅಪಾರ್ಟ್‌ಮೆಂಟ್‌ಲ್ಲಿ ಸದ್ಯಕ್ಕೆ ಬಾಡಿಗೆ ಮನೆಯಲ್ಲಿ ತಂಗಿರುವ *ಭವಿತ್‌ ಕುಟುಂಬ* ಈಗಾಗಲೇ ತನ್ನ ಏಕೈಕ ಪುತ್ರನ ಚಿಕಿತ್ಸೆಗಾಗಿ ಸುಮಾರು ಹನ್ನೆರಡು ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದೆ. ಇದ್ದುದ್ದಲ್ಲೆವನ್ನೂ ಕಳೆದುಕೊಂಡು, ಬಹಳಷ್ಟು ಸಾಲಗಳ ಮೂಟೆಯನ್ನೂ ಹೊತ್ತುಕೊಂಡು ಅಸಹಾಯಕರಾಗಿ ಪರಿತಪಿಸಿದೆ. ಮುಂದಿನ ಚಿಕಿತ್ಸೆಗೂ ಹಣವಿಲ್ಲದೆ ಕಂಗಾಲಾಗಿದೆ. ಭವಿತ್‌ಗಂತೂ ಪ್ರತಿ ತಿಂಗಳಿಗೆ ಸುಮಾರು ಅರವತ್ತು ಸಾವಿರದಷ್ಟು ಚಿಕಿತ್ಸೆಗೆ ಖರ್ಚಿದೆ. ಇವನ ಚಿಕಿತ್ಸೆಗೆ ಅಂದಾಜು ವೆಚ್ಚ 13 ಲಕ್ಷ ಆಗುವುದೆಂದು ವೈದ್ಯರು ತಿಳಿಸಿರುತ್ತಾರೆ..

ಬದುಕುವುದು ಪ್ರತಿಯೊಬ್ಬರ ಹಕ್ಕು. ಆದರೆ ವಾಸ್ತವ ಬೇರೆಯದೇ ಆಗಿರುತ್ತದೆ . ಭವಿಷ್ಯದ ಕನಸುಗಳನ್ನು ಕಾಣಲು ಅನಾರೋಗ್ಯದ ಸವಾಲು ಎದುರಿಸುತ್ತಿರುವ ಈ ಪುಟ್ಟ ಬಾಲಕನಿಗಾಗಿ ನಿಮ್ಮಲ್ಲಿ ನಮ್ರತೆಯ ವಿನಂತಿ ನಮ್ಮ ತಂಡ ಶಕ್ತಿ ಮೀರಿ ಈ ಬಾಲಕನಿಗೆ ತಮ್ಮಿಂದಾಗುವ ಧನ ಸಹಾಯವನ್ನು ಸಂಗ್ರಹಿಸಿ ನೀಡುವ ಭರವಸೆಯನ್ನು ಕುಟುಂಬಕ್ಕೆ ನೀಡಿದೆ.

ಅದಲ್ಲದೆ ನಾಳೆ *ಉಡುಪಿ ಪರ್ಯಾಯ ಮಹೋತ್ಸವದಲ್ಲಿ* ಧನ ಸಂಗ್ರಹಿಸಿ ನಮ್ಮಿಂದ ಆಗುವ ಸಹಾಯವನ್ನು ಮಾಡಬೇಕು ಎಂದು ಇಚ್ಚಿಸಿದ್ದೇವೆ.

ನಮಗೆಲ್ಲರಿಗೂ ಸಮಸ್ಯೆ ಇದ್ದದ್ದೆ ಆದರೆ ಕಮರಿದ ಕನಸುಗಳಿಗೆ ಮತ್ತೆ ರೆಕ್ಕೆ ಕಟ್ಟಿ ಹಾರಿಸುವ ಸಣ್ಣ ಪ್ರಯತ್ನವನ್ನು ಮಾಡಬಹುದು. ದಯವಿಟ್ಟು ತಮ್ಮ ಕೈಲಾದಷ್ಟು ಧನ ಸಹಾಯವನ್ನು ನೀಡಿ.

ದೇವರು ಕೊಟ್ಟ ಈ ಬಣ್ಣದ ಬದುಕು ಎಷ್ಟು ದಿನ, ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಬನ್ನಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ….
ಸುಕೇತ್ : +918310155994
ಅಶೋಕ್ : +918971962493
ಶಶಾಂಕ್ : +918904063034

ನಿಮ್ಮ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ….

Name : KARAVALI YOUTH CLUB
BANK : KARNAKATA BANK
BRANCH : MANIPAL
A/C NO : 5652500100452401
IFSC CODE : KARB0000565

Google pay : 7090002142

Karavali Youth Club (R) Udupi*