ಉಡುಪಿ : ಪ್ರಿಯಾಂಕ್ ಖರ್ಗೆ ಆರ್‌ಎಸ್‍ಎಸ್ ಬಂದ್ ಮಾಡ್ತಾರಂತೆ ಮಾಡಲಿ ನೋಡೋಣ : ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

Featured, ಉಡುಪಿ

ಉಡುಪಿ : ಪ್ರಿಯಾಂಕ್ ಖರ್ಗೆ ಆರ್‌ಎಸ್‍ಎಸ್ ಬಂದ್ ಮಾಡ್ತಾರಂತೆ ಮಾಡಲಿ ನೋಡೋಣ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಇಂದಿರಾಗಾಂಧಿಯವರಿಗೆ ಆರ್‌ಎಸ್‍ಎಸ್ ಬಂದ್ ಮಾಡಲು ಆಗಿಲ್ಲ. ಪ್ರಿಯಾಂಕ ಖರ್ಗೆ ಮಾಡ್ತಾರಂತೆ ಮಾಡಲಿ ನೋಡೋಣ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

ಆರ್‌ಎಸ್‍ಎಸ್ ಬಗ್ಗೆ ಪ್ರಿಯಾಂಕ ಖರ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ನಾನು ವ್ಯಕ್ತಿಗತ ದೂಷಣೆ ಮಾಡುವುದಿಲ್ಲ. ಪ್ರಧಾನಿಯಾಗಿದ್ದ ನೆಹರು ಅವರಿಗೆ ಆರ್ ಎಸ್ ಎಸ್ ರದ್ದು ಮಾಡಲು ಸಾಧ್ಯವಾಗಿಲ್ಲ. ಅವರೇ ಪಥ ಸಂಚಲದಲ್ಲಿ ಅವಕಾಶ ಕೊಟ್ಟು ಗೌರವಿಸಿದರು. ಚೀನಾ ಯುದ್ದದಲ್ಲಿ ಸೇನೆಗೆ ಬೆಂಬಲವಾಗಿ ನಿಂತದ್ದು ಆರ್ ಎಸ್ ಎಸ್ . ಪ್ರಿಯಾಂಕ ಖರ್ಗೆ ಅವರಿಗೆ ಇದೆಲ್ಲ ಅರ್ಥವಾಗಬೇಕು. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿಯವರಿಗೆ ಆರ್ ಎಸ್ ಎಸ್ ಬಂದ್ ಮಾಡಲು ಆಗಿಲ್ಲ. ಪ್ರಿಯಾಂಕ ಖರ್ಗೆ ಮಾಡ್ತಾರಂತೆ ಮಾಡ್ಲಿ ನೋಡೋಣ ಎಂದರು.

ಉಡುಪಿ : ದೀಪಾವಳಿ ಪ್ರಯುಕ್ತ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ – vishwanews24

Leave a Reply