ಉಡುಪಿ : ಫೇಸ್ಬುಕ್ ಜಾಹೀರಾತು ನಂಬಿ ಹಣ ಕಳೆದುಕೊಂಡ ಯುವಕ – vishwanews24
ಉಡುಪಿ : ಫೇಸ್ಬುಕ್ ಜಾಹೀರಾತು ನಂಬಿ ಹಣ ಕಳೆದುಕೊಂಡ ಯುವಕ
ಉಡುಪಿ: ಫೇಸ್ಬುಕ್ನಲ್ಲಿರುವ ಜಾಹೀರಾತನ್ನು ಗಮನಿಸಿ ಅಲ್ಲಿದ್ದ ಲಿಂಕ್ ಒತ್ತಿದ ಅಂಬಲಪಾಡಿಯ ಕಾಳಿಕಾಂಬಾ ನಗರದ ನಿವಾಸಿ ಅನಿರುದ್ಧ ರಾವ್ (23) ಅವರು ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾರೆ.
ಫೇಸ್ಬುಕ್ ನೋಡುತ್ತಿರುವಾಗ “Cheapest PC Parts in India by Kryptonix Gamiy’ ಎಂಬ ಜಾಹೀರಾತನ್ನು ನೋಡಿ ಅದರ ಮೇಲೆ ಕ್ಲಿಕ್ ಮಾಡಿ ಕಂಪ್ಯೂಟರ್ನ ಬಿಡಿಭಾಗವಾದ ಗ್ರಾಫಿಕ್ ಕಾರ್ಡನ್ನು ಆನ್ಲೈನ್ ಮುಖಾಂತರ ಆರ್ಡರ್ ಮಾಡಿದ್ದರು. ಅನಂತರ ಅಪರಿಚಿತ ವ್ಯಕ್ತಿ ಅವರನ್ನು ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ ಗ್ರಾಫಿಕ್ ಕಾರ್ಡ್ಗೆ ಹಣ ಪಾವತಿಸುವಂತೆ ಹೇಳಿದ್ದನು. ಅದರಂತೆ ಆತನ ಖಾತೆಗೆ ಡಿ. 17ರಂದು 55,000 ರೂ.ಗಳನ್ನು ಪಾವತಿ ಮಾಡಿದ್ದರು. ಹಣ ಪಡೆದ ಅನಂತರ ಆತನು ಅನಿರುದ್ಧ ಅವರೊಂದಿಗಿನ ಸಂಪರ್ಕ ಕಡಿತ ಮಾಡಿದ್ದಾನೆ. ಮೋಸದ ಅರಿವಾಗಿ ಅವರೀಗ ಪೊಲೀಸರ ಮೊರೆ ಹೊಕ್ಕಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
