ಉಡುಪಿ: ಬಿ.ಪಿ.ಎಲ್. ಕಾರ್ಡ್ ರದ್ದು ಪಡಿಸಿದರೆ ಉಗ್ರ ಪ್ರತಿಭಟನೆ , ಬಡವರಿಗೆ ನ್ಯಾಯಕೊಡಲು ಸಿದ್ಧ : ಶಾಸಕ ಯಶ್‌ಪಾಲ್‌ ಸುವರ್ಣ – vishwanews24

Featured, ಉಡುಪಿ

ಉಡುಪಿ: ಕಾಂಗ್ರೆಸ್‌ ಪಂಚ ಗ್ಯಾರಂಟಿಗಳು ಸಂಪೂರ್ಣ ವಿಫಲ, ರಾಜ್ಯ ಜನತೆಗೆ ಮೋಸ: ಶಾಸಕ ಯಶ್‌ಪಾಲ್‌ ಸುವರ್ಣ

ಉಡುಪಿ: ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿಗಳ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದು ತಾನು ಘೋಷಿಸಿದ 5 ಗ್ಯಾರಂಟಿಗಳು ಕೂಡ ಸಂಪೂರ್ಣವಾಗಿ ವಿಫಲವಾಗಿ ರಾಜ್ಯ ಜನತೆ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.ಮನೆಯ ಯಜಮಾನಿಗೆ ಪ್ರತಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಾರದ ನಾಲ್ಕು ತಿಂಗಳಾಗಿದೆ. ಅನ್ನಭಾಗ್ಯದ ಅಕ್ಕಿಯು ಇಲ್ಲ, ಅದರ ಹಣವು ಪಾವತಿ ಆಗಿಲ್ಲ. ಗೃಹ ಜ್ಯೋತಿ ಭಾಗ್ಯವು ನೆನೆಗುದಿಗೆ ಬಿದ್ದಿದ್ದು ವಿದ್ಯುತ್ ಬಿಲ್ ಏರಿಕೆಯಿಂದ ರಾಜ್ಯದ ಜನರಿಗೆ ಶಾಕ್‌ ನೀಡಿದೆ.ಯುವ ನಿಧಿಯ ಯೋಜನೆ ಹಳ್ಳ ಹಿಡಿದಿದೆ.ಈ ಎಲ್ಲ ಯೋಜನೆಯನ್ನು ರಾಜ್ಯ ಜನತೆ ತಾವಾಗಿ ಸರ್ಕಾರವನ್ನು ಕೇಳಿದ್ದಲ್ಲ. ಸರ್ಕಾರವೇ ಅವೈಜ್ಞಾನಿಕವಾಗಿ ಘೋಷಣೆ ಮಾಡಿ ಇದೀಗ ರಾಜ್ಯ ಜನತೆಗೆ ಮೋಸ ಮಾಡಿದೆ. ಎಂದು ಉಡುಪಿ ಶಾಸಕ ಯಶ್ನಾಲ್ ಸುವರ್ಣ ಆರೋಪ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು ; ಹಳೆಯ ಪಿಂಚಣಿ ಯೋಜನೆ ಜಾರಿ : ಸೈಯದ್ ನಾಸಿರ್ ಹುಸೇನ್ – vishwanews24

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಸಣ್ಣ ರೈತರು ಕೂಲಿ ಕಾರ್ಮಿಕರು ಮತ್ತು ಕಡುಬಡವರ ಬಿ.ಪಿ.ಎಲ್. ಕಾರ್ಡ್ ಅನ್ನು ರದ್ದುಗೊಳಿಸುವ ಸರ್ಕಾರದ ಆರನೇ ಗ್ಯಾರಂಟಿಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವ ಹಂತದಲ್ಲಿದೆ .ಇದಕ್ಕೆ ಪೂರಕವಾಗಿ ಸರ್ಕಾರ ಪ್ರತಿ ಗ್ರಾಮದ 400 ಕ್ಕಿಂತಲೂ ಹೆಚ್ಚು ಕುಟುಂಬಗಳ ಬಿ.ಪಿ.ಎಲ್. ಕಾರ್ಡುಗಳ ಪಟ್ಟಿಯನ್ನು ಪರಿಶೀಲನೆಗೆ ಸ್ಥಳೀಯ ರೇಷನ್ ಅಂಗಡಿಗೆ ಕಳಿಸಿದ್ದು ಈ ಪ್ರಕ್ರಿಯೆ ಹಿಂದೆ ಬಡ ಜನರ ಬಿ.ಪಿ.ಎಲ್. ಕಾರ್ಡ್‌ ರದ್ದಾಗುವ ಭೀತಿ ಎದುರಾಗಿದೆ.

ಯಾವುದೇ ಸಮೀಕ್ಷೆ ನಡೆಸದೆ ಗ್ಯಾರಂಟಿ ಯೋಜನೆಯನ್ನು ನೀಡಲು ಕಷ್ಟವಾಗುತ್ತದೆ ಎಂಬ ಒಂದೇ ಕಾರಣಕ್ಕೆ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಿದರೆ ಬಿಜೆಪಿ ಜನಪತಿನಿಧಿಗಳು ಮತ್ತು ಸೌಲಭ್ಯ ವಂಚಿತ ಫಲಾನುಭವಿಗಳೊಂದಿಗೆ ಉಗ್ರ ಪ್ರತಿಭಟನೆ ಮಾಡಿ ಬಡವರಿಗೆ ನ್ಯಾಯಕೊಡಲು ಸಿದ್ಧ. ಸರ್ಕಾರ ಏಕಾಏಕಿ ಬಿ.ಪಿ.ಎಲ್. ಕಾರ್ಡ್ ರದ್ದು ಪಡಿಸಿದರೆ ಬಿಜೆಪಿ ರಾಜ್ಯ ವ್ಯಾಪಿ ಹೋರಾಟ ನಡೆಸಲಿದೆ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಕುಂದಾಪುರ: ಕಾರಿನ ಬಾನೆಟ್ ಒಳಗೆ 12 ಅಡಿ ಉದ್ದದ ಬೃಹತ್  ಹೆಬ್ಬಾವು ಪತ್ತೆ – vishwanews24

Leave a Reply