ಉಡುಪಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ  ಹೈಕಮಾಂಡ್ ಕಿವಿಯಲ್ಲೂ ಹೇಳಿಲ್ಲ-ಕನ್ಫರ್ಮ್ ಮಾಡಿಲ್ಲ: ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ – vishwanews24

Featured, ರಾಜ್ಯ ನ್ಯೂಸ್

ಉಡುಪಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಕಿವಿಯಲ್ಲೂ ಹೇಳಿಲ್ಲ-ಕನ್ಫರ್ಮ್ ಮಾಡಿಲ್ಲ: ಜಿಲ್ಲಾಧ್ಯಕ್ಷ

ಸುರೇಶ್ ನಾಯಕ್ – vishwanews24

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೆಲವೊಂದು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರು ಸೇರಿದಂತೆ ಆಕಾಂಕ್ಷಿ ಅಭ್ಯರ್ಥಿಗಳು ಮುಂದಿನ ಚುನಾವಣೆಯ ದೃಷ್ಟಿಯಿಂದ ತಿರುಗಾಟ ಆರಂಭ ಮಾಡಿದ್ದು ಆದರೇ ಯಾರಿಗೂ ಕೂಡ ಇದುವರೆಗೆ ಟಿಕೆಟ್ ಕನ್ಫರ್ಮ್ ಮಾಡಿಕೊಟ್ಟಿಲ್ಲ ಮತ್ತು ಹೈಕಮಾಂಡ್ ಕಿವಿಯಲ್ಲೂ ಹೇಳಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಕಾಂಕ್ಷಿಗಳು ಕ್ಷೇತ್ರ ಪರ್ಯಟನೆ ಮಾಡುವುದು ತಪ್ಪಲ್ಲ ಆದರೇ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಮತ್ತು ಟಿಕೆಟ್ ಆಗಿದೆ ಎಂದು ಹೇಳಿಕೊಂಡು ತಿರುಗುವ ಮುಖೇನ ಕಾರ್ಯಕರ್ತರಲ್ಲಿ ತಳಮಳ ಉಂಟು ಮಾಡುವ ಕೆಲಸ ಆಗಬಾರದಾಗಿದೆ ಪಕ್ಷ ಸಂಘಟಿಸುವಲ್ಲಿ ಕೆಲಸ ಮಾಡಲಿ ಟಿಕೆಟ್ ಅವರನ್ನು ಹಿಂಬಾಲಿಸಿ ಬರುತ್ತದೆಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಜಾತಿ ಸಮೀಕರಣವನ್ನು ಪರಿಗಣಿಸಿಯೇ ಟಿಕೆಟ್ ನೀಡಬಹುದು ಅದರಲ್ಲೂ ಕಡಿಮೆ ಸಂಖ್ಯೆಯಿರುವ ಜಾತಿಗೂ ಕೂಡ ಈ ಸಲ ಟಿಕೆಟ್ ಸಿಗುವ ಸಾಧ್ಯತೆಯಿದೆ ಒಟ್ಟಾರೆ ಜಾತಿಗಿಂತಲೂ ಹಿಂದುತ್ವದ ಆಧಾರದಮೇಲೆ ಬಿಜೆಪಿ ಕೆಲಸ ಮಾಡುತ್ತದೆಂದರು.

ಜಿಲ್ಲೆಯಿಂದ ಇದುವರೆಗೂ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯದಿಂದ ಪಡೆದಿಲ್ಲ ಹಾಗಾಗಿ ಕಾರ್ಯಕರ್ತರು ಗೊಂದಲ ಮಾಡಿ ಕೊಳ್ಳುವ ಅಗತ್ಯವಿಲ್ಲ ಚುನಾವಣೆ ಘೋಷಣೆಯಾದ ನಂತರವಷ್ಟೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದು ಬಿಟ್ಟರೆ ಹೈಕಮಾಂಡ್ ಕಿವಿಯಲ್ಲಿ ಹೇಳುವುದು, ಚೀಟಿ ಬರೆದು ಕೊಡುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ ಎಂದು ಖಡಕ್ ನುಡಿದರು.

 

Leave a Reply